ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಇರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿರುದ್ಧ ಕೇರಳ ಹೈಕೋರ್ಟ್ ಬೇಸರ ವ್ಯಕ್ತಪಡಿಸಿ, ಇದರಲ್ಲಿ ರಾಜಕೀಯ ಅಜೆಂಡಾ ಇದೆ ಎಂಬ ಅನುಮಾನ ವ್ಯಕ್ತಪಡಿಸುವುದರ ಮೂಲಕ 1 ಲಕ್ಷ ರೂಪಾಯಿ ದಂಡದೊಂದಿಗೆ ವಜಾಗೊಳಿಸಿದೆ.
ವ್ಯಕ್ತಿಯೊಬ್ಬ ಕೇರಳ ಹೈಕೋರ್ಟ್ ನಲ್ಲಿ ಕೊರೊನಾ ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಭಾವ ಚಿತ್ರ ಇರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ವಾದ ಆಲಿಸಿದ ನ್ಯಾಯಮೂರ್ತಿ, ಪ್ರಮಾಣ ಪತ್ರದಲ್ಲಿ ಮೋದಿ ಅವರ ಫೋಟೋ ಇರುವುದನ್ನು ಕಂಡು ನೀವೇಕೆ ನಾಚಿಕೆ ಪಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ರಾಜಕೀಯ ಅಜೆಂಡಾ ಇರುವ ಅನುಮಾನವಿದೆ. ಹೀಗಾಗಿ ಈ ಅರ್ಜಿ ದುರುದ್ಧೇಶದಿಂದ ಸಲ್ಲಿಕೆಯಾಗಿದೆ ಎಂದು ನ್ಯಾಯಮೂರ್ತಿ ಪಿ.ವಿ. ಕುಂಇಕೃಷ್ಣನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಓಟಿಎಕ್ಸ್, ಯುನಾನಿ ಕ್ಷೇತ್ರಗಳಲ್ಲಿ 13 ಉತ್ಪನ್ನಗಳ ಬಿಡುಗಡೆ ಮಾಡಿದ ಹಮ್ದರ್ದ್
ಹಣ ಕೊಟ್ಟು ಲಸಿಕೆ ಪಡೆದ ಮೇಲೆ ಪ್ರಮಾಣ ಪತ್ರದ ಮೇಲೆ ಪ್ರಧಾನಿ ಫೋಟೋ ಮುದ್ರಿಸಿ ಪ್ರಚಾರ ಪಡೆಯುವ ಅವಶ್ಯಕತೆ ಏಕೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ವ್ಯಕ್ತಿಯೊಬ್ಬರ ಖಾಸಗಿ ದಾಖಲೆಯಾಗಿದ್ದು, ಅದರ ಮೇಲೆ ಫೋಟೋ ಏಕೆ ಎಂದು ಅರ್ಜಿದಾರರು ಪ್ರಶ್ನಿಸಿದ್ದರು.