ಭೀಮನ ಅಮಾವಾಸ್ಯೆ ದಿನದಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಅಪಾರ ಸಂಸ್ಥೆಯಲ್ಲಿ ಭಕ್ತರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಲಡ್ಡು ವಿತರಣಾ ಕೌಂಟರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೌಕರರೊಬ್ಬರು ಗಡಿಬಿಡಿಯಲ್ಲಿ ಬೆಂಗಳೂರು ಮೂಲದ ಭಕ್ತ ನರಸಿಂಹ ಎಂಬವರಿಗೆ ಲಾಡು ಪ್ರಸಾದದ ಜೊತೆಗೆ 2.91 ಲಕ್ಷ ಹಣವಿದ್ದ ಚೀಲವನ್ನೂ ಕೊಟ್ಟಿದ್ದರು.
ಬಳಿಕ ಈ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಸಿಸಿ ಟಿವಿ ಪರಿಶೀಲಿಸಿದ ವೇಳೆ ದೇಗುಲದ ಸಿಬ್ಬಂದಿ ಮಾಡಿದ್ದ ಎಡವಟ್ಟು ತಿಳಿದು ಬಂದಿತ್ತು. ಹೀಗಾಗಿ ಆ ಸಿಬ್ಬಂದಿಯೇ ಹಣ ಪಾವತಿಸಲು ಅಧಿಕಾರಿಗಳು ತಾಕೀತು ಮಾಡಿದ್ದರು.
ಆಕಸ್ಮಿಕವಾಗಿ ಹಣದ ಚೀಲ ಪಡೆದುಕೊಂಡಿದ್ದ ನರಸಿಂಹ ಅವರು ಇದೀಗ ಅದನ್ನು ಮರಳಿಸಿದ್ದು, ಈ ಪ್ರಮಾದವೆಸಗಿದ್ದ ದೇಗುಲದ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.