17 ವರ್ಷದ ಪುತ್ರ ತನ್ನ ತಂದೆಯನ್ನು ಲಟ್ಟಣಿಗೆಯಿಂದ ಹೊಡೆದು ಕೊಲೆ ಮಾಡಿದ ಆಘಾತಕಾರಿ ಘಟನೆ ದೆಹಲಿಯ ಸರಾಯ್ ರೋಹಿಲ್ಲಾದಲ್ಲಿ ನಡೆದಿದೆ.
ಪಿಎಸ್ ಸರೈ ರೋಹಿಲ್ಲಾ ಪೊಲೀಸರು ಆರೋಪಿ ಪುತ್ರನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದು ಆತನನ್ನು ಬಂಧಿಸಿದ್ದಾರೆ.
ಆಗಸ್ಟ್ 22ರಂದು ಈ ಘಟನೆ ಸಂಭವಿಸಿದ್ದು ರೈಲ್ವೆ ರಕ್ಷಣಾ ವಿಶೇಷ ಪಡೆಯ ಸಬ್ ಇನ್ಸ್ಪೆಕ್ಟರ್ ಅಶೋಕ್ ಬನ್ಸಿ ಲಾಲ್ ಎಂಬ ವ್ಯಕ್ತಿಯನ್ನು ಪಹಾರ್ ಗಂಜ್ನಲ್ಲಿರುವ ಉತ್ತರ ರೈಲ್ವೆ ಸೆಂಟ್ರಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸುವ ಮೊದಲೇ ಬನ್ಸಿ ಲಾಲ್ ಮೃತಪಟ್ಟಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಮೃತ ವ್ಯಕ್ತಿ ಪಕ್ಕೆಲುಬು ಸೇರಿದಂತೆ ವಿವಿಧೆಡೆ ಒಟ್ಟು 19 ಗಾಯಗಳನ್ನು ವೈದ್ಯರು ಗಮನಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಪೊಲೀಸರಿಗೆ ಬನ್ಸಿ ಲಾಲ್ ಮೃತಪಟ್ಟ ದಿನದಂದು ಯಾವುದೋ ಕ್ಷುಲ್ಲಕ ಕಾರಣಕ್ಕೆ ತನ್ನ ಪುತ್ರನೊಂದಿಗೆ ಜಗಳವಾಡಿದ್ದರು ಎಂಬ ವಿಚಾರ ತಿಳಿದು ಬಂದಿದೆ.
ಈ ಜಗಳವು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪುತ್ರನು ತನ್ನ ತಂದೆಯ ಮೇಲೆ ಲಟ್ಟಣಿಗೆಯಿಂದ ದಾಳಿ ನಡೆಸಿದ್ದಾನೆ ಹಾಗೂ ಮಾರಣಾಂತಿಕ ಹಲ್ಲೆಯಿಂದಾಗಿ ಬನ್ಸಿ ಲಾಲ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬನ್ಸಿಲಾಲ್ನನ್ನು ಹತ್ಯೆ ಮಾಡಲು ಬಳಕೆ ಮಾಡಿದ ಲಟ್ಟಣಿಗೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.