ಹಳ್ಳಿಗಳ ಕಡೆ ತೋಟದ ಬದಿಯಲ್ಲಿ ಕಳೆ ರೀತಿ ಬೆಳೆಯುವ ಗಿಡ ನೆಲ ನೆಲ್ಲಿ. ಇದರ ಉಪಯೋಗದ ಬಗ್ಗೆ ಗೊತ್ತಿಲ್ಲದೇ ಕೆಲವರು ಇದನ್ನು ಕಿತ್ತು ಬಿಸಾಡುತ್ತಾರೆ. ಈ ನೆಲ ನೆಲ್ಲಿಯ ಎಲೆಗಳು ನೆಲ್ಲಿಯ ಮರದ ಎಲೆಗಳಂತೆ ಇರುತ್ತದೆ. ಜತೆಗೆ ಎಲೆಯ ಹಿಂದುಗಡೆ ಮುತ್ತು ಪೋಣಿಸಿದ ರೀತಿ ಚಿಕ್ಕ ಚಿಕ್ಕ ಹಸಿರು ಕಾಯಿಗಳು ಇದೆ. ಈ ಗಿಡ ಚಿಕ್ಕದಾದರೂ ಇದು ಆರೋಗ್ಯಕ್ಕೆ ಮಾತ್ರ ತುಂಬಾ ಒಳ್ಳೆಯದು.
ಅತಿಸಾರ ಭೇದಿಗೆ ಇದರ ಕಷಾಯ ಹೇಳಿಮಾಡಿಸಿದ್ದು. ಈ ಗಿಡದ ರಸವನ್ನು ಮಜ್ಜಿಗೆಯೊಂದಿಗೆ ಸೇರಿಸಿ ಕುಡಿದರೆ ಜಾಂಡೀಸ್ ಕೂಡ ಕಡಿಮೆಯಾಗುತ್ತದೆ.
ಇನ್ನು ಚರ್ಮದ ಸಮಸ್ಯೆಗಳಿಂದ ಬಳಲುತ್ತಿರುವವರು ಇದರ ರಸ ಹಚ್ಚಿಕೊಂಡರೆ ಕಡಿಮೆಯಾಗುತ್ತದೆ. ಹೆಂಗಳೆಯರಿಗೆ ಕಾಡುವ ರಕ್ತಸ್ರಾವ ಕೂಡ ಇದರ ಕಷಾಯ ಕುಡಿಯುವುದರಿಂದ ನಿಯಂತ್ರಣಕ್ಕೆ ಬರುತ್ತದೆ.
ಇದರ ಕಷಾಯವನ್ನು ವಾರಕ್ಕೆ 3 ದಿನ ಕುಡಿಯುತ್ತಾ ಬಂದರೆ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.
ಮಕ್ಕಳಲ್ಲಿ ಕಂಡು ಬರುವ ಜ್ವರ, ಶೀತದಂತಹ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ.
ಒಂದು ಗ್ಲಾಸ್ ನೀರಿಗೆ ಇದರ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ¼ ಗ್ಲಾಸ್ ಗೆ ಇಳಿಸಿ ಇದನ್ನು ಕುಡಿಯಿರಿ.