alex Certify ರೋಗ ನಿರೋಧಕ ಶಕ್ತಿ ಮತ್ತಷ್ಟು ಬಲಪಡಿಸುತ್ತೆ ಅಂಜೂರದ ಹಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ನಿರೋಧಕ ಶಕ್ತಿ ಮತ್ತಷ್ಟು ಬಲಪಡಿಸುತ್ತೆ ಅಂಜೂರದ ಹಣ್ಣು

ಅತ್ತಿ ಅಥವಾ ಅಂಜೂರದ ಹಣ್ಣು ಎಂದು ಕರೆಯಿಸಿಕೊಳ್ಳುವ ಕೆಂಪು ಹಣ್ಣಿನ ಬಗ್ಗೆ ಹೆದರುವವರೇ ಹೆಚ್ಚು.

ಇದರೊಳಗೆ ಹುಳುಗಳಿರುತ್ತವೆ ಎಂಬ ಕಾರಣಕ್ಕೆ ಇದನ್ನು ದೂರವಿಡುವವರೇ ಅಧಿಕ. ಇದರ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದು ನಿಮಗೆ ಗೊತ್ತೇ?

ಒಣಗಿದ ಅಂಜೂರದ ಸೇವನೆಯಿಂದ ಹೃದಯದ ಕಾಯಿಲೆ ದೂರವಾಗುತ್ತದೆ. ಇದರಲ್ಲಿರುವ ರೋಗ ನಿರೋಧಕ ಶಕ್ತಿ ನಿಮ್ಮನ್ನು ಮತ್ತಷ್ಟು ಬಲಪಡಿಸುತ್ತದೆ. ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ.

ಒಣಹಣ್ಣುಗಳಲ್ಲಿ ಒಂದಾದ ಅಂಜೂರವನ್ನು ಹಲವು ಬಗೆಯ ಸಿಹಿತಿಂಡಿ, ಐಸ್ ಕ್ರೀಮ್ ಗಳ ತಯಾರಿ ವೇಳೆ ಬಳಸುತ್ತಾರೆ. ತುಸು ದುಬಾರಿಯಾದ ಈ ಹಣ್ಣಿನ ಸೇವನೆಯಿಂದ ಪುರುಷರ ಹಲವು ವೈಯಕ್ತಿಕ, ದೈಹಿಕ ಸಮಸ್ಯೆಗಳು ದೂರವಾಗುತ್ತವೆ ಎನ್ನಲಾಗಿದೆ.

ರಕ್ತಸಂಚಾರವನ್ನು ಸುಲಲಿತಗೊಳಿಸಿ ರಕ್ತವನ್ನು ಶುದ್ಧೀಕರಿಸುವ ಇದು ಹೃದಯ ಸಂಬಂಧಿ ರೋಗಗಳಿಂದ ನಿಮ್ಮನ್ನು ದೂರವಿಡುತ್ತದೆ. ದೇಹದಲ್ಲಿರುವ ಅನಗತ್ಯ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹವನ್ನು ಸ್ವಚ್ಛವಾಗಿಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...