alex Certify ರೋಗಿ ಸಾವಿಗೆ ನೊಂದುಕೊಂಡ ಆರೋಗ್ಯ ಕಾರ್ಯಕರ್ತೆ: ವೈರಲ್ ವಿಡಿಯೋಗೆ ಕಿಡಿಕಾರಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗಿ ಸಾವಿಗೆ ನೊಂದುಕೊಂಡ ಆರೋಗ್ಯ ಕಾರ್ಯಕರ್ತೆ: ವೈರಲ್ ವಿಡಿಯೋಗೆ ಕಿಡಿಕಾರಿದ ನೆಟ್ಟಿಗರು

ಇತ್ತೀಚಿನ ದಿನಗಳಲ್ಲಿ ಪ್ರಭಾವಶಾಲಿಯಾಗಲು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಸಕ್ರಿಯರಾಗಿರುತ್ತಾರೆ. ಪ್ರೇಮ ಪ್ರಸ್ತಾವನೆ ಮುಂತಾದ ಸಂತೋಷದ ವಿಡಿಯೋಗಳನ್ನು ಹಲವಾರು ಮಂದಿ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಟಿಕ್‌ಟಾಕ್ ವಿಡಿಯೋದಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರು ರೋಗಿಯನ್ನು ಕಳೆದುಕೊಂಡ ಬಗ್ಗೆ ಶೋಕಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ, ಇದು ನೆಟ್ಟಿಗರಿಗೆ ಅಷ್ಟು ಇಷ್ಟವಾದಂತೆ ತೋರಿಲ್ಲ. ಇಂತಹ ಸೂಕ್ಷ್ಮ ಸಮಸ್ಯೆಯನ್ನು ಬಳಸಿದ್ದಕ್ಕಾಗಿ ವಿಡಿಯೋದಲ್ಲಿರುವ ಮಹಿಳೆಗೆ ಭಾರಿ ಟೀಕೆ ವ್ಯಕ್ತವಾಗಿದೆ.

ಟಿಕ್‌ಟೋಕರ್ ಮತ್ತು ಆರೋಗ್ಯ ಕಾರ್ಯಕರ್ತೆ, ಆಸ್ಪತ್ರೆಯಲ್ಲಿ ರೋಗಿಯೊಬ್ಬರನ್ನು ಕಳೆದುಕೊಂಡ ನಂತರ ಬಹಳ ದುಃಖಿತರಾದ್ರು. ತನ್ನ ರೋಗಿಯ ಸಾವಿಗೆ ಕಾರಣವನ್ನು ಉಲ್ಲೇಖಿಸಲಾಗಿಲ್ಲವಾದರೂ, ಆಕೆ ಬಹಳ ದುಃಖಿತವಾಗಿದ್ದಳು.

ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ವಿಡಿಯೋ ಇದೀಗ ಟ್ವಿಟ್ಟರ್ ನಲ್ಲಿ ಕೂಡ ವೈರಲ್ ಆಗಿದೆ. ಇದು ಸುಮಾರು 13 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಆನ್‌ಲೈನ್‌ನಲ್ಲಿ ಸಹಾನುಭೂತಿ ಪಡೆಯಲು ಇಂತಹ ಸೂಕ್ಷ್ಮ ಸಮಸ್ಯೆಯನ್ನು ಬಳಸಿದ್ದಕ್ಕಾಗಿ ನೆಟ್ಟಿಗರು ಆಕೆಯನ್ನು ಖಂಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...