alex Certify ರೈಲಿನಲ್ಲಿ ಶೌಚಾಲಯಕ್ಕೆ ತೆರಳಿದ್ದ ತಾಯಿ, ಮಗು ಮರಳಿ ಬರಲೇ ಇಲ್ಲ; ನದಿಯಲ್ಲಿ ಸಿಕ್ತು ಇಬ್ಬರ ಮೃತ ದೇಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಶೌಚಾಲಯಕ್ಕೆ ತೆರಳಿದ್ದ ತಾಯಿ, ಮಗು ಮರಳಿ ಬರಲೇ ಇಲ್ಲ; ನದಿಯಲ್ಲಿ ಸಿಕ್ತು ಇಬ್ಬರ ಮೃತ ದೇಹ

ಮಗುವಿನೊಂದಿಗೆ ರೈಲಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಾಯಿ ಹಾಗೂ ಮಗು ಶೌಚಾಲಯಕ್ಕೆ ಹೋಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ಮಹಾರಾಷ್ಟ್ರದ ತುಮ್ಸಾನ್ ರೈಲು ನಿಲ್ದಾಣದ ಹತ್ತಿರ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ರೇವಾದಲ್ಲಿನ ಮಿಲಿಟರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಇಶಾಂತ್ ಎಂಬುವವರ ಪತ್ನಿ ಹಾಗೂ ಮಗುವೇ ಈ ರೀತಿ ದಾರುಣ ಅಂತ್ಯ ಕಂಡವರು ಎಂದು ತಿಳಿದು ಬಂದಿದೆ.

ಪೂಜಾ(27) ಹಾಗೂ 18 ತಿಂಗಳ ಮಗು ಹೀಗೆ ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ. ಮಗು ಹಾಗೂ ತಾಯಿ ಶೌಚಾಲಯಕ್ಕೆ ಹೋಗಿ ಮರಳಿ ಹಲವು ಸಮಯವಾದರೂ ಬಾರದ ಹಿನ್ನೆಲೆಯಲ್ಲಿ ಗಾಬರಿಗೊಂಡಿದ್ದ ಪತಿ ಗೊಂಡಾ ರೈಲು ನಿಲ್ದಾಣದಲ್ಲಿ ದೂರು ದಾಖಲಿಸಿದ್ದರು. ಈ ದಂಪತಿ ಮಧ್ಯಪ್ರದೇಶದಲ್ಲಿನ ರೇವಾದಿಂದ ನಾಗ್ಪುರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

ಈ ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ವೈಗಂಗಾ ನದಿ ಸೇತುವೆಯ ಹತ್ತಿರ ಮಹಿಳೆಯೊಬ್ಬರ ಶವ ಸಿಕ್ಕ ಕುರಿತು ತಿಳಿದು ಬಂದಿತ್ತು. ನದಿಯಲ್ಲಿ ತಾಯಿ ಹಾಗೂ ಮಗುವಿನ ಶವ ಪತ್ತೆಯಾಗಿತ್ತು. ಆಗ ಈ ವಿಚಾರ ಬೆಳಕಿಗೆ ಬಂದಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ರೈಲಿನ ಶೌಚಕ್ಕೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಮಗು ಆಯ ತಪ್ಪಿ ಬಿದ್ದಿದ್ದು, ಮಗುವನ್ನು ರಕ್ಷಿಸಲು ಹೋಗಿ ಮಹಿಳೆಯೂ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಆದರೂ ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮಗು ಹಾಗೂ ತಾಯಿ ರೈಲಿನಿಂದ ಬಿದ್ದರೂ ಅಲ್ಲಿದ್ದವರಿಗೆ ಹೇಗೆ ಗೊತ್ತಾಗಲಿಲ್ಲ? ಈ ಸಾವು ಆಕಸ್ಮಿಕವೋ? ಆತ್ಮಹತ್ಯೆಯೋ? ಅಥವಾ ಇದರ ಹಿಂದೆ ಬೇರೆಯವರ ಕೈವಾಡವಿದೆಯೋ? ಎಂಬ ಕುರಿತು ತನಿಖೆ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...