alex Certify ರೇಷ್ಮೆಯಂತಹ ಕೂದಲು ಬೇಕೆನ್ನುವವರು ಈ ಟಿಪ್ಸ್‌ ಫಾಲೋ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಷ್ಮೆಯಂತಹ ಕೂದಲು ಬೇಕೆನ್ನುವವರು ಈ ಟಿಪ್ಸ್‌ ಫಾಲೋ ಮಾಡಿ

ಕೂದಲು ತೇವಾಂಶ ಕಳೆದುಕೊಂಡಾಗ ಒರಟಾಗುತ್ತದೆ. ಇದರಿಂದ ಕೂದಲಿನ ಅಂದ ಕೆಡುತ್ತದೆ. ಈ ಒರಟು ಕೂದಲು ಸಮಸ್ಯೆಯನ್ನು ನಿವಾರಿಸಿ ಕೂದಲಿನ ತೇವಾಂಶ ಹೆಚ್ಚಿಸಿ ಸಿಲ್ಕಿ ಆ್ಯಂಡ್ ಶೈನಿ ಕೂದಲು ನಿಮ್ಮದಾಗಲು ಇದನ್ನು ಹಚ್ಚಿ.

*ಮೊಟ್ಟೆ : ಒರಟು ಕೂದಲನ್ನು ತೇವಗೊಳಿಸಲು ಮೊಟ್ಟೆಯ ಹಳದಿ ಭಾಗ ಬಳಸಬಹುದು. ಇದರಲ್ಲಿ ಸಾಕಷ್ಟು ಪ್ರೋಟಿನ್ ಮತ್ತು ಕೊಬ್ಬು ಇರುತ್ತದೆ. ಹಾಗೇ ಆಲಿವ್ ಆಯಿಲ್ ಕೂದಲಿನ ತೇವಾಂಶವನ್ನು ಲಾಕ್ ಮಾಡುತ್ತದೆ. ಹಾಗಾಗಿ ಮೊಟ್ಟೆಯ ಹಳದಿ ಭಾಗಕ್ಕೆ 2 ಚಮಚ ಆಲಿವ್ ಆಯಿಲ್ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ½ ಗಂಟೆ ಬಿಟ್ಟು ಶಾಂಪುವಿನಿಂದ ಕೂದಲನ್ನು ವಾಶ್ ಮಾಡಿ.

*ಬಾಳೆಹಣ್ಣು : ಕೂದಲಿನ ತೇವಾಂಶವನ್ನು ಲಾಕ್ ಮಾಡುವ ಬಹಳ ಶಕ್ತಿಯುತವಾದ ಅಂಶವೆಂದರೆ ಬಾಳೆಹಣ್ಣು. ಇದರಲ್ಲಿ ಪೊಟ್ಯಾಶಿಯಂ, ಕಾರ್ಬೋಹೈಡ್ರೇಟ್ಸ್ , ಜೀವಸತ್ವಗಳು ಮತ್ತು ನೈಸರ್ಗಿಕ ಎಣ್ಣೆಯ ಅಂಶವಿರುತ್ತದೆ. ಇದು ಕೂದಲಿಗೆ ಉತ್ತಮ ಕಂಡೀಷನರ್ ಆಗಿದೆ. ಇದು ಕೂದಲಿಗೆ ಹೊಳಪನ್ನು ನೀಡುತ್ತದೆ.

ಹಾಗಾಗಿ ಬಾಳೆಹಣ್ಣಿಗೆ ¼ ಕಪ್ ಮೊಸರು, 2 ಚಮಚ ಆಲೀವ್ ಆಯಿಲ್, ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ½ ಗಂಟೆ ಬಿಟ್ಟು ಶಾಂಪುವಿನಿಂದ ಕೂದಲನ್ನು ವಾಶ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...