ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಹೆಸರು ಥಳುಕು ಹಾಕಿಕೊಂಡಿರುವ ವಿಚಾರ ಎಲ್ಲರಿಗೂ ತಿಳಿದಿರುವಂತದ್ದೆ. ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ ಬಳಿಕ ಇಬ್ಬರ ನಡುವಿನ ಸ್ನೇಹ ಇನ್ನಷ್ಟು ಗಾಢವಾಗಿದೆ ಎನ್ನಲಾಗಿದೆ. ಈ ಸ್ಟಾರ್ ನಟರು ಆಗಾಗ ಜಿಮ್ನ ಹೊರಗೆ ಹಾಗೂ ರೆಸ್ಟಾರೆಂಟ್ಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ.
ನಾವಿಬ್ಬರು ಆತ್ಮೀಯ ಸ್ನೇಹಿತರು ಎಂದು ಹೇಳಿಕೊಳ್ಳುತ್ತಿರುವ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಬಾಂಡ್ ನೋಡಿದ ಅಭಿಮಾನಿಗಳಂತೂ ಇವರಿಬ್ಬರು ಆದಷ್ಟು ಬೇಗ ರಿಯಲ್ ಲೈಫ್ ಜೋಡಿಗಳಾಗಲಿ ಎಂದು ಬೇಡಿಕೊಳ್ತಿದ್ದಾರೆ.
ಭಾನುವಾರ ರಶ್ಮಿಕಾ ಹಾಗೂ ದೇವರಕೊಂಡ ಮುಂಬೈನ ಬಾಂದ್ರಾದಲ್ಲಿರುವ ಪ್ರಸಿದ್ಧ ರೆಸ್ಟಾರೆಂಟ್ ಒಂದರಲ್ಲಿ ಕಾಣಿಸಿಕೊಂಡರು. ಇಬ್ಬರು ಜೊತೆಯಾಗಿ ರೆಸ್ಟಾರೆಂಟ್ಗೆ ಭೇಟಿ ನೀಡಿದ ಫೋಟೋಗಳು ಪೆಪ್ಪಾರಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.
ರೆಸ್ಟಾರೆಂಟ್ಗೆ ಇಬ್ಬರು ಕ್ಯಾಶುವಲ್ ಆಗಿ ತಯಾರಾಗಿ ಬಂದಿದ್ದಾರೆ. ವಿಜಯ್ ದೇವರಕೊಂಡ ಟೈಗರ್ ಪ್ರಿಂಟ್ ಶರ್ಟ್, ಗಾಢ ಹಸಿರು ಬಣ್ಣದ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಶೂನಲ್ಲಿ ಕಾಣಿಸಿಕೊಂಡರೆ ನಟಿ ರಶ್ಮಿಕಾ ಮಂದಣ್ಣ ಕಪ್ಪು ಬಣ್ಣದ ಜಾಕೆಟ್ , ಕಪ್ಪು ಬಣ್ಣದ ಟಾಪ್, ಕಪ್ಪು ಬಣ್ಣದ ಪ್ಯಾಂಟ್ ನಲ್ಲಿ ಕಾಣಿಸಿಕೊಂಡರು.
ಇತ್ತೀಚಿನ ದಿನಗಳಲ್ಲಿ ವಿಜಯ್ ಹಾಗೂ ರಶ್ಮಿಕಾ ಬಾಲಿವುಡ್ಗೆ ಎಂಟ್ರಿ ಕೊಡುವ ತಯಾರಿಯಲ್ಲಿದ್ದಾರೆ. ವಿಜಯ್ ದೇವರಕೊಂಡ ಅನನ್ಯಾ ಪಾಂಡೆ ಜೊತೆ ನಟಿಸುತ್ತಿದ್ದರೆ ನಟಿ ರಶ್ಮಿಕಾ ಮಂದಣ್ಣ ಮಿಷನ್ ಮಜನು ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರ ಜೊತೆಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
https://youtu.be/mKvh_lcdZZQ