alex Certify ‘ರೂಪಾಯಿ’ ಚಿತ್ರದ ವಿಡಿಯೋ ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರೂಪಾಯಿ’ ಚಿತ್ರದ ವಿಡಿಯೋ ಹಾಡು ರಿಲೀಸ್

ಶೀರ್ಷಿಕೆಯಿಂದಲೇ ಸಾಕಷ್ಟು ಸದ್ದು ಮಾಡುತ್ತಿರುವ ವಿಜಯ್ ಜಗದಾಲ್ ನಿರ್ದೇಶನದ ‘ರೂಪಾಯಿ’ ಚಿತ್ರದ ‘ಕರೆಯದೆ’ ಎಂಬ ವಿಡಿಯೋ ಹಾಡೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಖ್ಯಾತ ಗಾಯಕಿ ಅನನ್ಯ ಭಟ್ ಈ ಹಾಡಿಗೆ ಧ್ವನಿಯಾಗಿದ್ದು, ಆನಂದ್ ರಾಜ್ ವಿಕ್ರಮ್ ಸಂಗೀತ ಹಾಗೂ ಉತ್ಸವ್ ಗೋನ್ವಾರ್ ಸಾಹಿತ್ಯವಿದೆ. ಈ ಹಾಡು ಕೆಲವೇ ನಿಮಿಷಗಳಲ್ಲಿ ಭರ್ಜರಿ ವೀಕ್ಷಣೆ ಪಡೆದಿದ್ದು ನೋಡುಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ದೊರೆತಿವೆ.

ವಿವಿಧ್ ಸಿನಿಮಾಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಮಂಜುನಾಥ್, ಹರೀಶ್ ಬಿ. ಕೆ., ಹಾಗೂ ವಿನೋದ ಬಂಡವಾಳ ಹೂಡಿದ್ದು, ವಿಜಯ್ ಜಗದಾಲ್, ಕೃಷಿ ತಾಪಂಡ ಸೇರಿದಂತೆ ರಾಮಚಂದನ್, ಅನಿಲ್ ಕುಮಾರ್, ಚಂದನ ರಾಘವೇಂದ್ರ, ಶಂಕರ್ ಮೂರ್ತಿ ತೆರೆ ಹಂಚಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...