ಬಿಸಿ ಬಿಸಿಯಾದ ಬಿಸಿಬೇಳೆ ಬಾತ್ ಯಾರಿಗಿಷ್ಟವಿಲ್ಲ ಹೇಳಿ? ಇದನ್ನು ಮಾಡುವುದು ದೊಡ್ಡ ಕೆಲಸ ಎನ್ನುವವರಿಗೆ ಇಲ್ಲಿ ಸುಲಭವಾಗಿ ಮಾಡುವ ಒಂದು ವಿಧಾನ ಇದೆ. ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು: 1/4 ಕೆಜಿ ಅಕ್ಕಿ, 100ಗ್ರಾಂ ತೊಗರಿ ಬೇಳೆ, 3ರಿಂದ 4ಟೀ ಸ್ಪೂನ್ ಎಣ್ಣೆ, ಅರ್ಧ ನಿಂಬೆ ಹಣ್ಣಿನ ಗಾತ್ರದ ಹುಣಸೆಹಣ್ಣಿನ ನೀರು, ಸ್ವಲ್ಪ ಕಡಲೆ ಬೀಜ, ಸ್ವಲ್ಪ ಸಾಸಿವೆ, 1ಟೀ ಸ್ಪೂನ್ ಅರಿಶಿನ, 1ಟೀ ಸ್ಪೂನ್ ಖಾರದ ಪುಡಿ, 2 ಟೊಮೇಟೊ 1 ಆಲೂಗಡ್ಡೆ, 2 ಚಮಚ ಬಿಸಿಬೇಳೆ ಬಾತ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಒಂದು ಈರುಳ್ಳಿ, 2 ದಂಟು ಕರಿ ಬೇವು, 1 ಒಣ ಮೆಣಸು, 1/2 ಕಪ್ ಬಟಾಣಿ, 1 ಕ್ಯಾರಟ್, 5ರಿಂದ 6 ಬೀನ್ಸ್, ಒಂದು ಸಣ್ಣ ಗಾತ್ರದ ಗಡ್ಡೆ ಕೋಸು.
ಕುಕ್ಕರ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಮೂರು ಲೋಟ ನೀರನ್ನು ಹಾಕಿ ಅದಕ್ಕೆ ತರಕಾರಿ, ಅಕ್ಕಿ, ಬೇಳೆ, ಸ್ವಲ್ಪ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಇವಿಷ್ಟು ಒಟ್ಟಿಗೆ ಹಾಕಿ ಮಿಕ್ಸ್ ಮಾಡಿ 2 ವಿಷಲ್ ಕೂಗಿಸಿಕೊಳ್ಳಿ. ನಂತರ ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದು ಬಿಸಿಯಾದ ಮೇಲೆ ಅದಕ್ಕೆ ಎಣ್ಣೆ ಹಾಕಿ ನಂತರ ಕಡಲೆ ಬೀಜ ಸಾಸಿವೆ ಕರಿ ಬೇವಿನ ಎಲೆ, ಈರುಳ್ಳಿ, ಒಣಮೆಣಸು, ಟೊಮೆಟೊ ಅರಶಿನ ಪುಡಿ, ಖಾರದ ಪುಡಿ, ಬಿಸಿ ಬೇಳೆ ಬಾತಿನ ಪೌಡರ್ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹುಣಸೆಹಣ್ಣಿನ ರಸ ಇವೆಲ್ಲ ಮಿಕ್ಸ್ ಮಾಡಿ ಒಂದರಿಂದ ಐದು ನಿಮಿಷ ಫ್ರೈ ಮಾಡಿ ಅದಕ್ಕೆ ಒಂದು ಕಪ್ ನೀರು ಹಾಕಿ ಸ್ವಲ್ಪ ಕೈಯಾಡಿಸಿ.
ನಂತರ ಕುಕ್ಕರಿಗೆ ಈ ಒಗ್ಗರಣೆಯನ್ನು ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಬಾತ್ ಸವಿಯಲು ಸಿದ್ಧ.