ಮಸಾಲೆಗಳಿಂದ ಕೂಡಿದ ಹೆಲ್ತೀ ಮತ್ತು ಸಿಂಪಲ್ ದಾಲ್ ಇದಾಗಿದೆ. ಬೇಳೆಗಳಿಂದ ಮಾಡಿರುವುದರಿಂದ ಇದರಲ್ಲಿ ದೇಹಕ್ಕೆ ಬೇಕಾದ ಕಾರ್ಬೋಹೈಡ್ರೈಟ್ಸ್ ಮತ್ತು ಪ್ರೋಟೀನ್ಸ್ ಯಥೇಚ್ಛವಾಗಿ ಸಿಗುತ್ತದೆ.
ಬೇಕಾಗಿರುವ ಸಾಮಗ್ರಿಗಳು :
ಆಮ್ ಚೂರ್ ಪೌಡರ್ – 1 ಟೀ ಚಮಚ, ಉದ್ದಿನ ಬೇಳೆ- ½ ಕಪ್ , ತೊಗರಿಬೇಳೆ- ½ ಕಪ್, ಹೆಸರು ಬೇಳೆ- ½ ಕಪ್, ಮಸೂರ್ ಬೇಳೆ – ½ ಕಪ್, ಗರಂ ಮಸಾಲಾ ಪುಡಿ -1 ಟೀ ಚಮಚ, ಅಚ್ಚ ಖಾರದ ಪುಡಿ- 1 ಟೀ ಚಮಚ, ಹಸಿಮೆಣಸಿನಕಾಯಿ 4-5, ಶುಂಠಿ-2 ಇಂಚು, ನೀರು-8 ಕಪ್, ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ :
ಸಾಸಿವೆ ಸ್ವಲ್ಪ, ಜೀರಿಗೆ ಸ್ವಲ್ಪ, ತುಪ್ಪ 4-5 ಚಮಚ, ಇಂಗು– ಚಿಟಿಕೆ.
ಮಾಡುವ ವಿಧಾನ :
ಮೊದಲಿಗೆ ತೊಗರಿಬೇಳೆ, ಉದ್ದಿನ ಬೇಳೆ, ಹೆಸರುಬೇಳೆ ಮತ್ತು ಮಸೂರ್ ದಾಲ್ ಎಲ್ಲವನ್ನು ಸೇರಿಸಿ 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಕೊಳ್ಳಿ. ನಂತರ ನೀರನ್ನು ಶೋಧಿಸಿಕೊಂಡು, ಬೇಳೆಗಳನ್ನು ಪಕ್ಕಕ್ಕಿಡಿ. ಆಮೇಲೆ ಕುಕ್ಕರ್ ನಲ್ಲಿ ಸಣ್ಣಗೆ ಹೆಚ್ಚಿದ ಶುಂಠಿ, ನೆನೆಸಿದ ಬೇಳೆಗಳು, ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು, 8 ಕಪ್ ನೀರನ್ನು ಸೇರಿಸಿ, ಮೀಡಿಯಂ ಫ್ಲೇಮ್ ನಲ್ಲಿ 7- 8 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. 4 ವಿಶಲ್ ಕೂಗಿಸಿಕೊಂಡ ನಂತರ ಸ್ಟೌವ್ ಆರಿಸಿಕೊಂಡು ಆವಿಯು ಹೊರ ಹೋಗುವವರೆಗೂ ಕಾಯಿಸಿರಿ. ನಂತರ ಕುಕ್ಕರ್ ತೆಗೆದು ಬೇಳೆಗಳೆಲ್ಲಾ ಮೃದುವಾಗಿ ಬೆಂದಿದೆಯೇ ನೋಡಿಕೊಳ್ಳಿ. ಒಂದು ವೇಳೆ ಗಟ್ಟಿಯಾಗಿದ್ದಲ್ಲಿ ನೀರನ್ನು ಬೆರೆಸಿ ತೆಳ್ಳಗೆ ಮಾಡಿಕೊಳ್ಳಬಹುದು.
ಕೊನೆಯಲ್ಲಿ ಒಂದು ಬಾಣಲೆಗೆ ಸ್ವಲ್ಪ ತುಪ್ಪವನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಬೆಂದ ಮಿಶ್ರಣವನ್ನು ಇದಕ್ಕೆ ಸೇರಿಸಿ, ನಂತರ ಅಚ್ಚ ಖಾರದ ಪುಡಿ, ಆಮ್ ಚೂರ್ ಪುಡಿ ಮತ್ತು ಗರಂ ಮಸಲಾ ಪುಡಿಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 3 ನಿಮಿಷ ಕುದಿಸಿದರೆ ಸ್ಪೈಸಿ ಮಿಕ್ಸಡ್ ದಾಲ್ ರೆಡಿ ಟು ಸರ್ವ್.