ಕೇಕ್ ಎಂದರೆ ಯಾರಿಗೆ ಇಷ್ಟವಿಲ್ಲ. ಮಕ್ಕಳಿಗಂತೂ ಇದು ಸಿಕ್ಕಾಪಟ್ಟೆ ಇಷ್ಟ. ಕೆಲವರಿಗೆ ಮೊಟ್ಟೆ ಹಾಕಿ ಕೇಕ್ ಮಾಡುವುದು ಇಷ್ಟವಿರಲ್ಲ. ಅಂತಹವರಿಗೆ ಇಲ್ಲಿ ಸುಲಭವಾಗಿ ಎಗ್ ಲೆಸ್ ಕೇಕ್ ಮಾಡುವ ವಿಧಾನ ಇಲ್ಲಿದೆ ನೋಡಿ. ಹಾಗೇ ಇದನ್ನು ಕುಕ್ಕರ್ ನಲ್ಲಿಯೇ ಮಾಡಬಹುದು.
ಬೇಕಾಗುವ ಸಾಮಾಗ್ರಿಗಳು: 1 ಕಪ್- ಮಜ್ಜಿಗೆ, 1 ಕಪ್- ಮೈದಾ ಹಿಟ್ಟು, ½ ಕಪ್ ಸಕ್ಕರೆ ಪುಡಿ, ¼ ಕಪ್ ಅಡುಗೆ ಎಣ್ಣೆ, 1 ಟೀ ಸ್ಪೂನ್ ಬೇಕಿಂಗ್ ಪೌಡರ್, ¼ ಟೀ ಸ್ಪೂನ್ ಬೇಕಿಂಗ್ ಸೋಡಾ, ಕೋಕಾ ಪೌಡರ್-1 ಟೇಬಲ್ ಸ್ಪೂನ್, ¼ ಟೀ ಸ್ಪೂನ್ ವೆನಿಲ್ಲಾ ಎಸೆನ್ಸ್, ಆರೇಂಜ್ ಫುಡ್ ಕಲರ್-1/4 ಟೀ ಸ್ಪೂನ್.
ಮಾಡುವ ವಿಧಾನ: ಮೊದಲಿಗೆ ಮಜ್ಜಿಗೆಗೆ ಸ್ವಲ್ಪ ಆರೇಂಜ್ ಫುಡ್ ಕಲರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಬೌಲ್ ಗೆ ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಕೋಕೊ ಪೌಡರ್ ಹಾಕಿ ಚೆನ್ನಾಗಿ ಜರಡಿ ಹಿಡಿದಿಟ್ಟುಕೊಳ್ಳಿ. ನಂತರ ಇದಕ್ಕೆ ಅಡುಗೆ ಎಣ್ಣೆ, ಮಜ್ಜಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ತಿರುಗಿಸಿ. ನಂತರ ಇದನ್ನು ಕೇಕ್ ಮೌಲ್ಡ್ ಗೆ ಹಾಕಿ. ಕುಕ್ಕರ್ ತಳಕ್ಕೆ ಒಂದು ಪ್ಲೇಟ್ ಇಟ್ಟು. ಅದರ ಮೇಲೆ ಈ ಮಿಶ್ರಣವಿರುವ ಪಾತ್ರೆ ಇಟ್ಟು 40 ನಿಮಿಷಗಳ ಕಾಲ ಬೇಯಿಸಿಕೊಂಡರೆ ರುಚಿಕರವಾದ ವೆನಿಲ್ಲಾ ಕೇಕ್ ರೆಡಿ.