ಅವರೆಕಾಳಿನ ಪಲಾವ್ ಬೆಳಗ್ಗಿನ ತಿಂಡಿಗೆ ಯಾಕೆ ಸವಿಯಬಾರದು. ಇಲ್ಲಿದೆ ನೋಡಿ ಅದರ ರೆಸಿಪಿ.
ಟಿ-20 ವಿಶ್ವಕಪ್ ವಿಜೇತ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತಾ…? ಇಲ್ಲಿದೆ ಮಾಹಿತಿ
ಬೇಕಾಗುವ ಸಾಮಾಗ್ರಿಗಳು
ಬಾಸುಮತಿ ಅಕ್ಕಿ – 1 1/2 ಕಪ್
ಅವರೆಕಾಳು – 1 ಕಪ್
ಈರುಳ್ಳಿ ಹೆಚ್ಚಿದ್ದು – 1 ಕಪ್
ಟೊಮೆಟೊ ಹೆಚ್ಚಿದ್ದು – 1/2 ಕಪ್
ನಿಂಬೆಹಣ್ಣು – ಅರ್ಧ
ಉಪ್ಪು ರುಚಿಗೆ ತಕ್ಕಷ್ಟು
ತುಪ್ಪ / ಎಣ್ಣೆ – 5 ಚಮಚ
ಲವಂಗ – 4
ಏಲಕ್ಕಿ – 2
ಪಲಾವ್ ಎಲೆ – 2
ಚಕ್ಕೆ – 2 ತುಂಡು
ರುಬ್ಬಿಕೊಳ್ಳಲು
ತೆಂಗಿನಕಾಯಿ ತುರಿ – 1/2 ಕಪ್
ಬೆಳ್ಳುಳ್ಳಿ – 10 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ – 2
ಶುಂಠಿ – 1 ಇಂಚು
ಮಾಡುವ ವಿಧಾನ
ಮಿಕ್ಸಿಗೆ ತೆಂಗಿನ ಕಾಯಿ ತುರಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಶುಂಠಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಕುಕ್ಕರ್ ಗೆ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ನಂತರ ಪಲಾವ್ ಎಲೆ, ಏಲಕ್ಕಿ, ಚೆಕ್ಕೆ, ಲವಂಗವನ್ನು ಹಾಕಿ ಹುರಿದುಕೊಳ್ಳಬೇಕು. ಈರುಳ್ಳಿಯನ್ನು ಹಾಕಿ ಬಾಡಿಸಿಕೊಳ್ಳಬೇಕು. ಬಳಿಕ ಟೊಮೆಟೊ ಮತ್ತು ಅವರೆಕಾಳನ್ನು ಹಾಕಿ. ನಂತರ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಬೇಕು.
BIG NEWS: ಬಿರುಗಾಳಿ ಎಬ್ಬಿಸಿದ ಬಿಟ್ ಕಾಯಿನ್ ಕೇಸ್ ದಾಖಲೆ ಬಿಡುಗಡೆ ಶೀಘ್ರ
ನಂತರ ಅರ್ಧ ಗಂಟೆ ಮೊದಲು ನೀರಿನಲ್ಲಿ ನೆನೆಸಿಟ್ಟು ಕೊಂಡ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಬೇಯುತ್ತಿರುವ ಪದಾರ್ಥಗಳ ಜೊತೆ ಸೇರಿಸಬೇಕು. ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ಅಥವಾ ಮೂರು ವಿಷಲ್ ಆದ ಮೇಲೆ ಒಲೆಯನ್ನು ಆರಿಸಿ. ಈಗ ಬಿಸಿಬಿಸಿಯಾದ ರುಚಿಯಾದ ಅವರೆಕಾಳಿನ ಪಲಾವ್ ರಾಯತದೊಂದಿಗೆ ಸವಿಯಲು ರೆಡಿ.