
ಸಿಹಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಈ ಮಿಲ್ಕ್ ಹಲ್ವಾ ಮಾಡಿಕೊಂಡು ಒಮ್ಮೆ ಸವಿದು ನೋಡಿ. ತಿನ್ನಲು ಸಖತ್ ರುಚಿ ಆಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
2 ಕಪ್ – ಹಾಲು, 1/3 ಕಪ್ – ಸಕ್ಕರೆ, 1 ಟೇಬಲ್ ಸ್ಪೂನ್ – ರವೆ, 1 ಟೇಬಲ್ ಸ್ಪೂನ್ – ಮೊಸರು, 3 ಟೇಬಲ್ ಸ್ಪೂನ್ – ತುಪ್ಪ, 1/8 ಟೀ ಸ್ಪೂನ್ – ಏಲಕ್ಕಿ ಪುಡಿ.
ಮಾಡುವ ವಿಧಾನ:
ಹಾಲನ್ನು ಒಂದು ಪ್ಯಾನ್ ಗೆ ಹಾಕಿ ಅದನ್ನು ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿ. ಇದು ಸಣ್ಣ ಉರಿಯಲ್ಲಿ ಕುದಿಯುತ್ತ 2 ಕಪ್ ಹಾಲು 1 ಕಪ್ ನಷ್ಟು ಆಗುವವರೆಗೆ ಕುದಿಸಿ. ಇದಕ್ಕೆ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ ರವೆ ಸೇರಿಸಿ ಇದು ಕುದಿದು ದಪ್ಪ ಮಿಶ್ರಣಕ್ಕೆ ಬರುತ್ತಿದ್ದಂತೆ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ತುಪ್ಪ ಹಾಕಿ ಮಿಕ್ಸ್ ಮಾಡಿ. ತಳ ಹತ್ತದಂತೆ ಎಚ್ಚರ ವಹಿಸಿ. ನಂತರ ಇದು ತಳ ಬಿಡುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ ಏಲಕ್ಕಿ ಪುಡಿ ಸೇರಿಸಿ ಸರ್ವ್ ಮಾಡಿ.