ಮಂಗಳೂರು ಸೌತೆಕಾಯಿಯಲ್ಲಿ ನೀರಿನ ಅಂಶವಿರುವುದರಿಂದ ಈ ಬೇಸಿಗೆಯಲ್ಲಿ ಅನ್ನದೊಂದಿಗೆ ಇದರ ಸಾಂಬಾರ್ ಮಾಡಿ ಸೇವಿಸುವು ಬಹಳ ಪ್ರಯೋಜನಕಾರಿಯಾಗಿದೆ. ಇದನ್ನು ತಯಾರಿಸುವ ಬಗೆ ಹೇಗೆ ಎಂಬುದು ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಮಂಗಳೂರು ಸೌತೆಕಾಯಿ- ಮಧ್ಯಮಗಾತ್ರದ ಸೌತೆ 1
ತೊಗರಿಬೇಳೆ – ¼ ಕಪ್
ಅರಶಿನ ಪುಡಿ – 2 ಟೀ ಚಮಟ
ಟೊಮೆಟೊ – ಅರ್ಧ
ತೆಂಗಿನಕಾಯಿ ತುರಿ – 1 ಕಪ್
ಬ್ಯಾಡಗಿ ಮೆಣಸು – 5
ಉದ್ದಿನ ಬೇಳೆ – 1 ಟೀ ಚಮಚ
ಕಡಲೇಬೇಳೆ – 1 ಟೀ ಚಮಚ
ಧನಿಯಾ ಬೀಜ – 2 ಟೀ ಚಮಚ
ಜೀರಿಗೆ – ½ ಟೀ ಚಮಚ
ಮೆಂತ್ಯ – ¼ ಟೀ ಚಮಚ
ಈರುಳ್ಳಿ – ಅರ್ಧ
ಸಾಸಿವೆ, ಬೆಳ್ಳುಳ್ಳಿ, ಮೆಣಸು – ಒಗ್ಗರಣೆಗೆ
ಅಡುಗೆ ಎಣ್ಣೆ – 2 ಟೀ ಚಮಚ
ಹುಣಸೆಹುಳಿ – ಸ್ವಲ್ಪ
ಬೆಲ್ಲ – ಸ್ವಲ್ಪ
ಕರಿಬೇವು ಸೊಪ್ಪು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲಿಗೆ ಒಂದು ಮಧ್ಯಮಗಾತ್ರದ ಸೌತೆಕಾಯಿಯನ್ನು ತೆಗೆದುಕೊಂಡು ತಿರುಳನ್ನು ತೆಗೆದು, ಕತ್ತರಿಸಿ. ಬಳಿಕ ಕುಕ್ಕರ್ ಗೆ ¼ ತೊಗರಿಬೇಳೆ ಹಾಕಿ ಅದಕ್ಕೆ ಕತ್ತರಿಸಿ ಸೌತೆಕಾಯಿ ಹಾಕಿ, ಸ್ವಲ್ಪ ನೀರು ಹಾಕಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಅರಶಿನ, ಟೊಮೆಟೋ ಸೇರಿಸಿ 3 ವಿಶಿಲ್ ಬರಿಸಿ.
ಇತ್ತ, ಬ್ಯಾಡಗಿ ಮೆಣಸಿನಕಾಯಿಯನ್ನು ಹುರಿಯಿರಿ, ಅದರ ಜೊತೆಗೆ ಧನಿಯಾ, ಉದ್ದಿನ ಬೇಳೆ, ಕಡಲೇಬೇಳೆ, ಮೆಂತ್ಯ, ಜೀರಿಗೆ, ಕರಿಬೇವಿನ ಸೊಪ್ಪನ್ನು ಸಹ ಹುರಿಯಿರಿ.
ಬಳಿಕ ಒಂದು ಕಪ್ ತೆಂಗಿನಕಾಯಿ ತುರಿಯೊಂದಿಗೆ ಹುರಿದ ಈ ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಹ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಬಳಿಕ ಈ ಮಸಾಲೆಯನ್ನು ಬೇಯಿಸಿಟ್ಟ ಸೌತೆಕಾಯಿಗೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ. ಸಾಂಬಾರ್ ಚೆನ್ನಾಗಿ ಕುದಿದ ಬಳಿಕ ಒಗ್ಗರಣೆ ಹಾಕಿದ್ರೆ, ಅನ್ನದೊಂದಿಗೆ ರುಚಿರುಚಿಯಾದ ಮಂಗಳೂರು ಸೌತೆಕಾಯಿ ಸಾಂಬಾರ್ ಸವಿಯಲು ಸಿದ್ಧ.