ಎರೆಯಪ್ಪ ಮಾಡಲು ಬೇಕಾಗುವ ಸಾಮಾಗ್ರಿ:
ಮೊದಲಿಗೆ ಅರ್ಧ ಕಪ್ ಅಕ್ಕಿ ತೆಗೆದುಕೊಳ್ಳಿ. ಕಾಲು ಕಪ್ ತೆಂಗಿನಕಾಯಿ ತುರಿ, 3 ದೊಡ್ಡ ಚಮಚ ದಪ್ಪ ಅವಲಕ್ಕಿ, ಹಾಗೇ ಕಾಲು ಕಪ್ ಬೆಲ್ಲ, 3 ದೊಡ್ಡ ಚಮಚ ನೀರು, ಏಲಕ್ಕಿ 3, ಕರಿಯಲು ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ ಅಕ್ಕಿ ಹಾಗೂ ಅವಲಕ್ಕಿಯನ್ನು ಶುದ್ಧವಾದ ನೀರಿನಿಂದ ತೊಳೆಯಿರಿ. ನಂತರ ಇವೆರಡನ್ನೂ ಮೂರು ಗಂಟೆ ಹೊತ್ತು ಚೆನ್ನಾಗಿ ನೆನೆಸಿರಿ. ನಂತರ ಇದರ ನೀರೆಲ್ಲಾ ಬಸಿದು ಒಂದು ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಬೆಲ್ಲ, ಕಾಯಿ ತುರಿ, ಏಲಕ್ಕಿ ಹಾಕಿ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ತುಂಬಾ ತೆಳುವಾಗಿ ರುಬ್ಬಬೇಡಿ. ಎಣ್ಣೆ ಬಾಣಲೆಗೆ ಬಿಡುವ ಹದದಲ್ಲಿ ಇದ್ದರೆ ಸಾಕು.
ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಜೋರು ಉರಿ ಬೇಡ. ಮಧ್ಯಮ ಉರಿಯಲ್ಲಿ ಇರಲಿ. ಎಣ್ಣೆ ಕಾದ ನಂತರ ಒಂದು ಚಮಚದಲ್ಲಿ ಈ ಹಿಟ್ಟನ್ನು ತೆಗೆದುಕೊಂಡು ಎಣ್ಣೆ ಬಾಣಲೆಗೆ ಬಿಡಿ. ಎರಡು ಕಡೆ ಕೆಂಪಾಗುವವರೆಗೆ ಕಾಯಿಸಿರಿ. ರುಚಿಯಾದ ಸಿಹಿಯಾದ ಎರೆಯಪ್ಪ ಸವಿಯಿರಿ.