ಹುರುಳಿಕಾಳಿನಲ್ಲಿ ಕಬ್ಬಿಣದಂಶ ಹೇರಳವಾಗಿದೆ. ಹಾಗೇ ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಇದರ ಸಾರು ಕೂಡ ತುಂಬಾ ರುಚಿಕರವಾಗಿರುತ್ತದೆ. ಹಾಗೇ ಬಿಸಿ ಅನ್ನದ ಜತೆಗೆ ಇದರ ಚಟ್ನಿ ಚೆನ್ನಾಗಿರುತ್ತದೆ.
ಇಲ್ಲಿ ಹುರುಳಿಕಾಳಿನ ಚಟ್ನಿ ಮಾಡುವ ವಿಧಾನ ಇದೆ ನೋಡಿ.
ಬೇಕಾಗುವ ಸಾಮಗ್ರಿಗಳು:
½ ಕಪ್ – ಹುರುಳಿಕಾಳು, , 1 ಕಪ್ – ಸಾಂಬಾರ ಈರುಳ್ಳಿ, 2 ಎಸಳು – ಬೆಳ್ಳುಳ್ಳಿ, 4 – ಕೆಂಪು ಮೆಣಸು, 2 ಟೀ ಸ್ಪೂನ್ – ಓಂ ಕಾಳು, ½ ಟೀ ಸ್ಪೂನ್ – ಧನಿಯಾ ಬೀಜ, ½ ಟೀ ಸ್ಪೂನ್ – ಬೆಲ್ಲ, 2 ಟೇಬಲ್ ಸ್ಪೂನ್ – ತೆಂಗಿನಕಾಯಿ ತುರಿ, 1 ಟೇಬಲ್ ಸ್ಪೂನ್ – ಹುಣಸೆಹಣ್ಣಿನ ರಸ, 1 ಟೀ ಸ್ಪೂನ್ – ಎಣ್ಣೆ, ಉಪ್ಪು – ರುಚಿಗೆ ತಕ್ಕಷ್ಟು, ಇನ್ನು ಒಗ್ಗರಣೆಗೆ 1ಟೇಬಲ್ ಸ್ಪೂನ್ – ಎಣ್ಣೆ, 5 ಎಸಳು – ಕರಿಬೇವು, 2 – ಕೆಂಪು ಮೆಣಸು, 1 ಟೀ ಸ್ಪೂನ್ – ಉದ್ದಿನಬೇಳೆ, 1 ಟೀ ಸ್ಪೂನ್ – ಸಾಸಿವೆ, ½ ಟೀ ಸ್ಪೂನ್ – ಇಂಗು.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ಧನಿಯಾ ಬೀಜ, ಒಣಮೆಣಸು, ಕರಿಬೇವು ಹಾಕಿ ಫ್ರೈ ಮಾಡಿ. ನಂತರ ಈರುಳ್ಳಿ, ಬೆಳ್ಳುಳ್ಳಿ ಕೂಡ ಸೇರಿಸಿ ನಂತರ ಹುರುಳಿಕಾಳು ಹಾಕಿ ಫ್ರೈ ಮಾಡಿ. ಇದು ಪರಿಮಳ ಬರುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಬೆಲ್ಲ, ತೆಂಗಿನಕಾಯಿ ತುರಿ, ಹುಣಸೆಹಣ್ಣು ಸೇರಿಸಿ ನಯವಾಗಿ ಪೇಸ್ಟ್ ಮಾಡಿಕೊಳ್ಳಿ. ನಂತರ ಒಂದು ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕರಿಬೇವು, ಒಣಮೆಣಸು, ಇಂಗು ಹಾಕಿ ಹುರಿಯಿರಿ. ಇದನ್ನು ಹುರುಳಿಕಾಳಿನ ಚಟ್ನಿಗೆ ಸೇರಿಸಿ ಸರ್ವ್ ಮಾಡಿ.