ಕೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟದ ಖಾದ್ಯ. ಆದರೆ ಕೆಲವರಿಗೆ ಮೊಟ್ಟೆ ಹಾಕಿದ ಕೇಕ್ ಇಷ್ಟವಿರುವುದಿಲ್ಲ. ಅಂತವರಿಗಾಗಿ ಇಲ್ಲಿ ಮೊಟ್ಟೆ ಹಾಕದೇ ಮಾಡಿದ ಕ್ಯಾರೆಟ್ ಕೇಕ್ ಮಾಡುವ ವಿಧಾನದ ಕುರಿತು ತಿಳಿಸಲಾಗಿದೆ.
ಇದು ನೋಡುವುದಕ್ಕೆ ಮಾತ್ರವಲ್ಲ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ ಜತೆಗೆ ಆರೋಗ್ಯಕರ ಕೂಡ ಹೌದು.
ಫೋನ್ ನಲ್ಲಿರುವ ಫೋಟೋ ಯಾರಿಗೂ ಕಾಣದಂತೆ ಹೈಡ್ ಮಾಡೋದು ಹೇಗೆ ಗೊತ್ತಾ?
ಬೇಕಾಗುವ ಸಾಮಾಗ್ರಿ: ಸಣ್ಣಗೆ ಕತ್ತರಿಸಿದ ವಾಲ್ ನಟ್-1 ಕಪ್, ತುರಿದ ಕ್ಯಾರೆಟ್-1 ಕಪ್, ಪುಡಿ ಮಾಡಿದ ಸಕ್ಕರೆ-1 ಕಪ್, ಬೆಣ್ಣೆ-2 ದೊಡ್ಡ ಚಮಚ, ಖರ್ಜೂರ-1/2 ಕಪ್, ಮೈದಾ ಹಿಟ್ಟು-1 ಕಪ್. ಬೇಕಿಂಗ್ ಪೌಡರ್-1 ಟೀ ಸ್ಪೂನ್, ಸೋಡಾ-3 ಟೇಬಲ್ ಸ್ಪೂನ್, ಕೋಕೋ ಪೌಡರ್-1 ಟೇಬಲ್ ಸ್ಪೂನ್, ಚೋಕೋ ಚಿಪ್ಸ್-ಸ್ವಲ್ಪ.
ಒಂದು ಕೇಕ್ ಪ್ಯಾನ್ ಗೆ ವಾಲ್ ನಟ್, ತುರಿದ ಕ್ಯಾರೆಟ್, ಸಕ್ಕರೆ ಪುಡಿ, ಬೆಣ್ಣೆ, ಖರ್ಜೂರ, ಚಾಕೋ ಚಿಪ್ಸ್, ಚಾಕೋಲೇಟ್ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇನ್ನೊಂದು ಪ್ಯಾನ್ ಗೆ ಮೈದಾ ಹಿಟ್ಟು, ನೀರು, ಬೆಣ್ಣೆ, ಬೇಕಿಂಗ್ ಪೌಡರ್, ಸೋಡಾ, ಕೋಕೋ ಪೌಡರ್ ಹಾಕಿ ಚೆನ್ನಾಗಿ ಕಲಸಿ.
ಕಾಫಿ ಕೊಡೋದು ಲೇಟಾಗಿದ್ದಕ್ಕೆ ಗ್ರಾಹಕಿ ಮಾಡಿದ್ದೇನು ಗೊತ್ತಾ…..?: ವಿಡಿಯೋ ವೈರಲ್
ಇನ್ನೊಂದು ಬೌಲ್ ನಲ್ಲಿದ್ದ ಕ್ಯಾರೆಟ್ ತುರಿ, ಸಕ್ಕರೆಯನ್ನೆಲ್ಲಾ ಇದಕ್ಕೆ ಸೇರಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ಪ್ರಿ ಹೀಟ್ ಮಾಡಿಟ್ಟುಕೊಂಡ ಒವೆನ್ ನಲ್ಲಿ 20 ನಿಮಿಷ ಬೇಕ್ ಮಾಡಿದರೆ ರುಚಿಯಾದ ಚಾಕೋಲೇಟ್ ಕ್ಯಾರೆಟ್ ಕೇಕ್ ತಿನ್ನಲು ರೆಡಿ.