ಮೆಕ್ಕೆಜೋಳ – 2 ಕಪ್
ನೀರು – 2 ಕಪ್
ಬೊಂಬಾಯಿ ರವೆ – 1/2 ಕಪ್
ಸಕ್ಕರೆ – 2 ಕಪ್
ತುಪ್ಪ – 1/4 ಕಪ್
ಏಲಕ್ಕಿ ಪುಡಿ – 1 ಚಮಚ
ಬಾದಾಮಿ ಗೋಡಂಬಿ ಸ್ವಲ್ಪ
ಮಾಡುವ ವಿಧಾನ
ಕೊಬ್ಬರಿ ಹಾಲಿನ ಹಾಗೇ ಮೆಕ್ಕೆಜೋಳ ಹಾಲನ್ನು ತಯಾರಿಸಿಕೊಳ್ಳಬೇಕು. ಮೆಕ್ಕೆಜೋಳ ಬೀಜಕ್ಕೆ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಮೂರು ಕಪ್ ಬರುವವರೆಗೂ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.
ಈಗ ಬಾಣಲೆಯಲ್ಲಿ ಒಂದು ಚಮಚ ತುಪ್ಪ ಬಿಸಿ ಮಾಡಿ ರವೆಯನ್ನು ಹುರಿದುಕೊಳ್ಳಬೇಕು. ಮತ್ತೊಂದು ಒಲೆ ಮೇಲೆ ಪಾತ್ರೆ ಇಟ್ಟು ಮೆಕ್ಕೆಜೋಳ ಹಾಲನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು.
ಹಾಲಿನ ಉರಿ ಕಡಿಮೆ ಮಾಡಿ ಮಧ್ಯೆ ಮಧ್ಯೆ ಕಲಸುತ್ತಾ ರವೆಯನ್ನು ಹಾಕಬೇಕು. ಮುಕ್ಕಾಲು ಭಾಗ ಬೆಂದ ನಂತರ ಸಕ್ಕರೆ ಹಾಕಬೇಕು. ಸಕ್ಕರೆ ಕರಗಿ ಹಲ್ವಾ ತಯಾರಾಗುವ ವೇಳೆಯಲ್ಲಿ ಮಧ್ಯಮಧ್ಯ ತುಪ್ಪ ಹಾಕುತ್ತಿರಬೇಕು.
ಹಲ್ವಾ ಪೂರ್ಣವಾಗಿ ತಯಾರಾದ ನಂತರ ಏಲಕ್ಕಿ ಪುಡಿ, ಗೋಡಂಬಿ, ಬಾದಾಮಿ ಹಾಕಿ ಮತ್ತೊಂದು ಸಲ ಕಲಸಿದರೆ ಸಿಹಿಯಾದ ಮೆಕ್ಕೆಜೋಳದ ಹಾಲಿನ ಹಲ್ವಾ ಸವಿಯಲು ಸಿದ್ಧ.