ಮಾಂಸಹಾರ ಪ್ರಿಯರಿಗೆ ಚಿಕನ್ ಎಂದರೆ ತುಂಬಾ ಇಷ್ಟ. ಅದರಲ್ಲೂ ಸಾಕಷ್ಟು ವೆರೈಟಿ ಮಾಡಿಕೊಂಡು ತಿನ್ನುವುದೆಂದರೆ ಮತ್ತಷ್ಟು ಖುಷಿ. ಚಿಕನ್ ಸುಕ್ಕಾ, ಚಿಕನ್ ಸಾರು ತಿಂದು ತಿಂದು ಬೇಜಾರಾಗಿರುವವರು ಒಮ್ಮೆ ಈ ಚಿಕನ್ ಪಾಪ್ ಕಾರ್ನ್ ಅನ್ನು ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು: 250 ಗ್ರಾಂ ಚಿಕನ್, 2 ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್, 1 ಮೊಟ್ಟೆ, 1 ಕಪ್-ಬ್ರೆಡ್ ಕ್ರಂಬ್ಸ್, ¼ ಟೀ ಸ್ಪೂನ್ ಉಪ್ಪು, ¾ ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ¼ ಕಪ್ ಕಾಳು ಮೆಣಸಿನ ಪುಡಿ, ¾ ಟಿ ಸ್ಪೂನ್ ಕೆಂಪುಮೆಣಸಿನ ಪುಡಿ, ಕರಿಯಲು ಎಣ್ಣೆ.
ಮಾಡುವ ವಿಧಾನ: ಒಂದು ದೊಡ್ಡ ಬೌಲ್ ಗೆ ಖಾರದ ಪುಡಿ, ಕಾಳು ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಇದಕ್ಕೆ ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಂಡ ಚಿಕನ್ ಪೀಸ್ ಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಇದಕ್ಕೆ ಕಾರ್ನ್ ಫ್ಲೋರ್ ಹಿಟ್ಟು ಹಾಕಿ. ನಂತರ ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಚಿಕನ್ ಪೀಸ್ ಅನ್ನು ಬ್ರೆಡ್ ಕ್ರಂಬ್ಸ್ ಮೇಲೆ ಹೊರಳಾಡಿಸಿ ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಿ. ರುಚಿಕರವಾದ ಚಿಕನ್ ಪಾಪ್ ಕಾರ್ನ್ ಅನ್ನು ಸವಿಯಿರಿ.