ಬಾಯಲ್ಲಿಟ್ಟರೆ ಕರಗುವ ಗುಲಾಬ್ ಜಾಮೂನು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸುಲಭವಾಗಿ ಮಾಡಬಹುದಾದ ಈ ತಿನಿಸು ಎಂದರೆ ಎಲ್ಲರಿಗೂ ಇಷ್ಟ. ಮನೆಯಲ್ಲಿಯೇ ಸುಲಭವಾಗಿ ಈ ಗುಲಾಬ್ ಜಾಮಾನು ಮಾಡುವ ವಿಧಾನ ಇಲ್ಲಿದೆ ನೋಡಿ.
1 ಕಪ್ ಹಾಲಿನ ಪುಡಿ, 5 ಟೇಬಲ್ ಸ್ಪೂನ್-ಮೈದಾ ಹಿಟ್ಟು, 1ಟೀ ಸ್ಪೂನ್-ತುಪ್ಪ, ¼ ಟೀ ಸ್ಪೂನ್-ಬೇಕಿಂಗ್ ಸೋಡಾ, ಎಣ್ಣೆ-ಕರಿಯಲು, 2 ಟೇಬಲ್ ಸ್ಪೂನ್- ಹಾಲು, 1 ಟೇಬಲ್ ಸ್ಪೂನ್- ನಿಂಬೆ ಹಣ್ಣಿನ ರಸ, ಸಕ್ಕರೆ-1 ½ ಕಪ್, ಏಲಕ್ಕಿ ಪುಡಿ-1/4 ಟೀ ಸ್ಪೂನ್.
ಮೊದಲಿಗೆ ಸಕ್ಕರೆ ಪಾಕ ರೆಡಿ ಮಾಡಿಕೊಳ್ಳಿ. ಒಂದು ಬಾಣಲೆಗೆ ಸಕ್ಕರೆ, ನೀರು, ಏಲಕ್ಕಿ ಪುಡಿ ಹಾಕಿ ಕುದಿಸಿಕೊಳ್ಳಿ. ಇದು ಸ್ವಲ್ಪ ಅಂಟು ಬಂದರೆ ಸಾಕು. ನಂತರ ಗ್ಯಾಸ್ ಆಫ್ ಮಾಡಿ.
ನಂತರ ಒಂದು ಬೌಲ್ ಗೆ ಮೈದಾ ಹಿಟ್ಟು, ಹಾಲಿನ ಪುಡಿ, ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇನ್ನೊಂದು ಪಾತ್ರೆಗೆ 2 ಟೇಬಲ್ ಸ್ಪೂನ್ ನಷ್ಟು ಹಾಲು, ಲಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಮೈದಾ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಹಿಟ್ಟಿನ ಮುದ್ದೆ ರೀತಿ ಮಾಡಿಕೊಳ್ಳಿ. ನಂತರ ಇದರಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಳ್ಳಿ. ಎಣ್ಣೆ ಕರಿಯಲು ಇಟ್ಟು ಅದಕ್ಕೆ ಮಾಡಿಟ್ಟುಕೊಂಡ ಉಂಡೆ ಹಾಕಿ ಕೆಂಪು ಬಣ್ಣ ಬರುವವರೆಗೆ ಕರಿಯಿರಿ. ನಂತರ ಇದನ್ನು ಸಕ್ಕರೆ ಪಾಕಕ್ಕೆ ಹಾಕಿ. 2 ಗಂಟೆಗಳ ಕಾಲ ಹಾಗೇ ಬಿಡಿ. ನಂತರ ಸರ್ವ್ ಮಾಡಿ.