ಅನ್ನ, ಚಪಾತಿ ಮಾಡಿದಾಗ ಸಾಂಬಾರಿನ ಜತೆಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಕ್ಯಾಪ್ಸಿಕಂ ಮಸಾಲ ಇದೆ ನೋಡಿ. ಮನೆಯಲ್ಲಿ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
3 ಹದ ಗಾತ್ರದ ಕ್ಯಾಪ್ಸಿಕಂ – ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, 1 ಟೊಮೆಟೊ, 1 ಈರುಳ್ಳಿ, ಉಪ್ಪು ರುಚಿಗೆ ತಕ್ಕಷ್ಟು, ಧನಿಯಾ ಪೌಡರ್ – 1 ಟೀ ಸ್ಪೂನ್, ಖಾರದ ಪುಡಿ – 1/2 ಟೀ ಸ್ಪೂನ್, ಅರಿಶಿನ – 1/4 ಟೀ ಸ್ಪೂನ್, ತೆಂಗಿನಕಾಯಿ ತುರಿ – 1/3 ಕಪ್, ಶುಂಠಿ – 1/2 ಇಂಚು, ಹಸಿಮೆಣಸು – 2, ಬೆಳ್ಳುಳ್ಳಿ – 4 ಎಸಳು ಎಣ್ಣೆ – 2 ಟೇಬಲ್ ಸ್ಪೂನ್, ಜೀರಿಗೆ – 1 ಟೀ ಸ್ಪೂನ್, ಕರಿಬೇವು – 10 ಎಸಳು.
ಚಿಕನ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಕೋಳಿ ಮೊಟ್ಟೆ, ಮಾಂಸದಿಂದ ಪೌಷ್ಠಿಕಾಂಶ ಹೆಚ್ಚಳ
ಮಾಡುವ ವಿಧಾನ:
ಹಸಿಮೆಣಸು, ತೆಂಗಿನಕಾಯಿ ತುರಿ, ಬೆಳ್ಳುಳ್ಳಿ ಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.
ಈರುಳ್ಳಿ, ಟೊಮೆಟೊ, ಕ್ಯಾಪ್ಸಿಕಂ ಅನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದು ಬಿಸಿಯಾಗುತ್ತಲೇ ಅದಕ್ಕೆ ಎಣ್ಣೆ, ಜೀರಿಗೆ, ಕರಿಬೇವು ಹಾಕಿ. ನಂತರ ಈರುಳ್ಳಿ ಸೇರಿಸಿ. ಈರುಳ್ಳಿ ಕೆಂಪಗಾದ ಮೇಲೆ ಟೊಮೆಟೊ ಹಾಕಿ ನಂತರ ಮಸಾಲ ಪೌಡರ್ ಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 3 ಟೇಬಲ್ ಸ್ಪೂನ್ ನೀರು ಹಾಕಿ ಮುಚ್ಚಳ ಮುಚ್ಚಿ. ಟೊಮೆಟೊ ಮೆತ್ತಗಾದ ಮೇಲೆ ರುಬ್ಬಿಟ್ಟುಕೊಂಡ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇದಕ್ಕೆ ಕ್ಯಾಪ್ಸಿಕಂ ಸೇರಿಸಿ ಸ್ವಲ್ಪ ನೀರು ಚಿಮುಕಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದಕ್ಕೆನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 8 ನಿಮಿಷಗಳ ಕಾಲ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ.