ಬೆಳಿಗ್ಗೆ ತಿಂಡಿಗೆ ರುಚಿಕರವಾದ ತರಕಾರಿ ಭಾತ್ ಇದ್ದರೆ ಸವಿಯುವುದಕ್ಕೆ ಚೆನ್ನಾಗಿರುತ್ತದೆ. ಇಲ್ಲಿ ವಾಂಗಿಭಾತ್ ಪೌಡರ್ ಬಳಸಿ ಸುಲಭವಾಗಿ ಮಾಡುವಂತಹ ತರಕಾರಿಭಾತ್ ಇದೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
2 ಕಪ್ – ಅನ್ನ, ಬೀನ್ಸ್ – 10, ಕ್ಯಾರೆಟ್ – 2, ಬಟಾಣಿ – ¼ ಕಪ್, ವಾಂಗಿಭಾತ್ ಪೌಡರ್ – 2 ಚಮಚ, ಕರಿಬೇವು – 5 ಎಸಳು, ಬೆಲ್ಲ – ಸಣ್ಣ ತುಂಡು, ಅರಿಸಿನ – 1/4 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಹುಣಸೆಹಣ್ಣಿನ ರಸ – 2 ಟೇಬಲ್ ಸ್ಪೂನ್, ಟೊಮೆಟೊ – 1, ಕಡಲೆಬೇಳೆ – 1 ಟೀ ಸ್ಪೂನ್, ಉದ್ದಿನಬೇಳೆ – 1 ಟೀ ಸ್ಪೂನ್, ಸಾಸಿವೆ – 1/4 ಟೀ ಸ್ಪೂನ್, ಶೇಂಗಾಬೀಜ – 2 ಟೇಬಲ್ ಸ್ಪೂನ್.ಎಣ್ಣೆ – 2 ಚಮಚ.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗುತ್ತಲೇ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಶೇಂಗಾ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಅರಿಶಿನ, ಕರಿಬೇವು, ಟೊಮೆಟೊ ಸೇರಿಸಿ. ಟೊಮೆಟೊ ಮೆತ್ತಗಾಗುತ್ತಿದ್ದಂತೆ ಇದಕ್ಕೆ ವಾಂಗಿಭಾತ್ ಪೌಡರ್ 2 ಚಮಚ ಸೇರಿಸಿ 1 ನಿಮಿಷಗಳ ಕಾಲ ಫ್ರೈ ಮಾಡಿ.
ನಂತರ ಕತ್ತರಿಸಿಕೊಂಡ ಕ್ಯಾರೆಟ್, ಬೀನ್ಸ್, ಬಟಾಣಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹುಣಸೆ ಹಣ್ಣಿನ ರಸ, ಸ್ವಲ್ಪ ನೀರು ಸೇರಿಸಿ ಉಪ್ಪು ಹಾಕಿ ಬೇಯಿಸಿಕೊಳ್ಳಿ. ಇದು ಬೆಂದು ಬರುತ್ತಿದ್ದಂತೆ ಅದಕ್ಕೆ ಬೆಲ್ಲದ ತುಂಡು ಹಾಕಿ ಮಿಕ್ಸ್ ಮಾಡಿ ನಂತರ ಅನ್ನ ಸೇರಿಸಿ. ಬೇಕಿದ್ದರೆ ಕೊತ್ತಂಬರಿಸೊಪ್ಪು ಉದುರಿಸಿ.