
ಸುದೀಪ್ ಸಂದರ್ಶನವೊಂದರಲ್ಲಿ ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಹೇಳಿಕೆ ನೀಡಿದ ನಂತರ ಅಜಯ್ ಮತ್ತು ಸುದೀಪ್ ನಡುವೆ ಆನ್‌ಲೈನ್ ನಲ್ಲಿ ಪರಸ್ಪರ ವಾದ ಬೆಳೆದಿತ್ತು. ನಂತರ ಅನುವಾದದಲ್ಲಿ ಏನೋ ತಪ್ಪಾಗಿದೆ ಅಂತೇಳಿ ಅಲ್ಲಿಗೆ ಅಜಯ್ ದೇವಗನ್ ವಿವಾದವನ್ನು ತಣ್ಣಗಾಗಿಸಿರೋದು ನಿಮಗೆ ಗೊತ್ತೇ ಇದೆ.
ನಟರಿಬ್ಬರು ತಮ್ಮ ನಡುವೆ ಭಿನ್ನಾಭಿಪ್ರಾಯಗಳನ್ನು ತಾರದೆ ಸುಮ್ಮನಾದ್ರೂ, ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಇದು ತೀವ್ರ ಚರ್ಚೆಗೆ ಕಾರಣವಾಯಿತು. ಇದೀಗ, ಅನೇಕ್ ಟ್ರೇಲರ್‌ನಲ್ಲಿನ ಆಯುಷ್ಮಾನ್ ಅವರ ಸಂಭಾಷಣೆ ಮತ್ತೆ ಇದನ್ನು ನೆನಪು ಮಾಡಿಸಿದೆ.
ಚಿತ್ರದ ಟ್ರೇಲರ್ ನಲ್ಲಿ, ಆಯುಷ್ಮಾನ್ ತೆಲಂಗಾಣದ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸುತ್ತಾರೆ. ಅವರು ಹಿಂದಿ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದಾರೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತಕ್ಕೆ ಸಂಬಂಧಿಸಿದ ಪರಿಕಲ್ಪನೆಗಳು ಮತ್ತು ಪೂರ್ವಭಾವಿ ಕಲ್ಪನೆಗಳು ಬಗ್ಗೆ ಮಾತನಾಡಿದ್ದಾರೆ. ಇದು ಹೃತಿಕ್ ರೋಷನ್ ಮತ್ತು ತಾಪ್ಸಿ ಪನ್ನು ಸೇರಿದಂತೆ ಅನೇಕರಿಂದ ಮೆಚ್ಚುಗೆ ಪಡೆದಿದೆ.
ಈಶಾನ್ಯ ಭಾರತದ ಭದ್ರತೆಗಾಗಿ ಕೆಲಸ ಮಾಡುವ ಒಬ್ಬ ರಹಸ್ಯ ಪೊಲೀಸ್ ಎಂದು ನಟನನ್ನು ಪರಿಚಯಿಸುವುದರೊಂದಿಗೆ ಟ್ರೇಲರ್ ಪ್ರಾರಂಭವಾಗುತ್ತದೆ. ಈ ಪ್ರದೇಶದಲ್ಲಿ ಪ್ರತ್ಯೇಕತಾವಾದಿ ಗುಂಪುಗಳೊಂದಿಗೆ ವ್ಯವಹರಿಸುವುದು ಅವರ ಕೆಲಸ ಎಂದು ಅವರು ಉಲ್ಲೇಖಿಸಿದ್ದಾರೆ. ನಂತರ ಏನೇನಾಗುತ್ತದೆ ಎಂಬುದು ಸಿನಿಮಾದಲ್ಲಿ ಮೂಡಿಬಂದಿದೆ.