ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಸಿಎಫ್ಐ ಕಾರ್ಯಕರ್ತರು ಮಂಗಳೂರು ಕೋಣಾಜೆ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಗಂಗೋತ್ರಿ ಆವರಣದಲ್ಲಿ ಪ್ರತಿಭಟನೆ ನಡೆಸಿರುವ ಸಿಎಫ್ ಐ ಕಾರ್ಯಕರ್ತರು ನೂತನ ನೀತಿಯಲ್ಲಿ ಮಧ್ಯಯುಗ ಇತಿಹಾಸ ತೆಗೆದು ಹಾಕಲಾಗಿರುವ ನೀತಿ ಖಂಡಿಸಿದ್ದಾರೆ. ಪ್ರಾಚೀನ ಹಾಗೂ ಈಗಿನ ಇತಿಹಾಸವನ್ನು ಕಲಿಸಲಾಗುತ್ತಿದೆ. ಪ್ರಾಚೀನ ಯುಗದ ಇತಿಹಾಸದಲ್ಲಿ ಮೌಢ್ಯತೆ ತುಂಬಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಪುಟ್ಟ ಕಂದನಿಗೆ ಮನಬಂದಂತೆ ಥಳಿಸಿದ ಪಾಪಿ ತಾಯಿ; ವಿಡಿಯೋ ನೋಡಿ ದಂಗಾದ ಜನ
ಸಿಎಫ್ಐ ಕಾರ್ಯಕರ್ತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದಿದ್ದಾರೆ.