alex Certify ರಾಷ್ಟ್ರೀಯ ಭಾಷೆ ಅಲ್ಲ ಎಂದ ಮೇಲೆ ನಿಮ್ಮ ಸಿನಿಮಾವನ್ನು ಹಿಂದಿಯಲ್ಲಿ ಯಾಕೆ ಡಬ್ ಮಾಡುತ್ತೀರಿ ? ಕಿಚ್ಚ ಸುದೀಪ್ ಗೆ ಅಜಯ್ ದೇವಗನ್ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರೀಯ ಭಾಷೆ ಅಲ್ಲ ಎಂದ ಮೇಲೆ ನಿಮ್ಮ ಸಿನಿಮಾವನ್ನು ಹಿಂದಿಯಲ್ಲಿ ಯಾಕೆ ಡಬ್ ಮಾಡುತ್ತೀರಿ ? ಕಿಚ್ಚ ಸುದೀಪ್ ಗೆ ಅಜಯ್ ದೇವಗನ್ ಪ್ರಶ್ನೆ

ಮುಂಬೈ: ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ಹೇಳಿಕೆ ನೀಡಿದ್ದ ನಟ ಕಿಚ್ಚ ಸುದೀಪ್ ಗೆ ಬಾಲಿವುಡ್ ನಟ ಅಜಯ್ ದೇವಗನ್, ಹಾಗಾದರೆ ಹಿಂದಿ ಭಾಷೆಗೆ ಡಬ್ ಮಾಡಿ ಯಾಕೆ ಸಿನಿಮಾ ರಿಲೀಸ್ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಜಯ್ ದೇವಗನ್, ಪ್ರೀತಿಯ ಸಹೋದರ ಕಿಚ್ಚ ಸುದೀಪ್ ಅವರೇ, ನಿಮ್ಮ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದ ಮೇಲೆ ನಿಮ್ಮ ಮಾತೃ ಭಾಷೆ ಚಿತ್ರಗಳನ್ನು ಹಿಂದಿಯಲ್ಲೇಕೆ ಡಬ್ ಮಾಡಿ ರಿಲೀಸ್ ಮಾಡುತ್ತೀರಿ ? ಎಂದು ಕೇಳಿದ್ದಾರೆ.

ಹಿಂದಿ ನಮ್ಮ ಮಾತೃ ಭಾಷೆ. ಅದು ರಾಷ್ಟ್ರಭಾಷೆಯಾಗಿದ್ದು ಎಂದಿಗೂ ರಾಷ್ಟ್ರಭಾಷೆಯಾಗಿಯೇ ಇರುತ್ತದೆ ಎಂದು ಹೇಳಿದ್ದಾರೆ.

ಅಜಯ್ ದೇವಗನ್ ಟ್ವೀಟ್ ಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದು, ಭಾರತದಲ್ಲಿ ರಾಷ್ಟ್ರೀಯ ಭಾಷೆ ಸ್ಥಾನಮಾನ ಕೇವಲ ಹಿಂದಿ ಭಾಷೆಗೊಂದೇ ನೀಡಲಾಗಿಲ್ಲ. ಕನ್ನಡದಂತೆಯೇ ಹಿಂದಿಯೂ ಒಂದು ಭಾಷೆ. ಅಜಯ್ ದೇವಗನ್ ಅವರದ್ದು ಅರ್ಥವಿಲ್ಲದ ಟ್ವೀಟ್ ಎಂದು ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...