alex Certify ರಾಯಲ್ ಎನ್‌ಫೀಲ್ಡ್ ಅನ್ನೇ ಹೋಲುವ ಎಲೆಕ್ಟ್ರಿಕ್ ‘ಬುಲೆಟ್’; ದಂಗಾಗಿಸುವಂತಿದೆ ಇದರ ಫೀಚರ್ಸ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಯಲ್ ಎನ್‌ಫೀಲ್ಡ್ ಅನ್ನೇ ಹೋಲುವ ಎಲೆಕ್ಟ್ರಿಕ್ ‘ಬುಲೆಟ್’; ದಂಗಾಗಿಸುವಂತಿದೆ ಇದರ ಫೀಚರ್ಸ್‌…!

ರಾಯಲ್ ಎನ್‌ಫೀಲ್ಡ್, ಬೈಕ್‌ ಪ್ರಿಯರ ಫೇವರಿಟ್‌. ಹೈ ಸ್ಪೀಡ್ ಬುಲೆಟ್‌ನ ಮೈನಸ್‌ ಪಾಯಿಂಟ್‌ ಅಂದ್ರೆ ಭಾರೀ ಶಬ್ಧ. ಆದರೆ  ಸ್ವಲ್ಪವೂ ಶಬ್ಧವಿಲ್ಲದ ಬುಲೆಟ್‌ ಈಗ ಮಾರುಕಟ್ಟೆಗೆ ಬಂದಿದೆ. ಇದು ವಿದ್ಯುತ್ ಚಾಲಿತ ಬೈಕ್‌. ಹಾಗಾಗಿ ಸ್ವಲ್ಪವೂ ಸದ್ದು ಮಾಡುವುದಿಲ್ಲ. ಬೆಂಗಳೂರು ಮೂಲದ ಬುಲೆಟೀರ್ ಕಸ್ಟಮ್ಸ್ ಇದನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಬುಲೆಟ್‌ಗೆ ಗ್ಯಾಸೋಲಿನ್ ಎಂದು ಹೆಸರಿಡಲಾಗಿದೆ. ಇದು ರಾಯಲ್ ಎನ್‌ಫೀಲ್ಡ್ ಬುಲೆಟ್ 1984 ಮಾದರಿಯನ್ನು ಆಧರಿಸಿದೆ.

ಬೈಕ್‌ಗೆ ವಿಭಿನ್ನ ಲುಕ್ ನೀಡಲು ಚಾಸಿಸ್ ಅನ್ನು 3 ಇಂಚುಗಳಷ್ಟು ಉದ್ದ ಮಾಡಲಾಗಿದೆ. ಇದರಲ್ಲಿ ಹೊಸ ವಿನ್ಯಾಸದ ಇಂಧನ ಟ್ಯಾಂಕ್ ನೀಡಲಾಗಿದೆ. ಬೈಕ್‌ನ ಇಂಜಿನ್ ತೆಗೆದು ಬ್ಯಾಟರಿ ಅಳವಡಿಸಲಾಗಿದೆ. ಇದನ್ನು ಆಯಿಲ್‌ ಟ್ಯಾಂಕ್‌ನ ಕೆಳಗೆ ಇರಿಸಲಾಗಿದೆ. ಇದು ಮೂರು ವಿಭಿನ್ನ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ. 5kW BLDC ಹಬ್ ಮೋಟಾರ್ ಮತ್ತು 72V 80Ah ಬ್ಯಾಟರಿ ಪ್ಯಾಕ್ ಅನ್ನು ಬಳಸಲಾಗಿದೆ. ಈ ಬೈಕ್‌ ಒಮ್ಮೆ ಚಾರ್ಜ್‌ ಮಾಡಿದ್ರೆ 90 ಕಿಮೀ ಓಡಬಲ್ಲದು. ಎಕಾನಮಿ ಮೋಡ್‌ನಲ್ಲಿ 100 ಕಿಮೀಗಿಂತ ಹೆಚ್ಚು ಚಲಿಸುತ್ತದೆ. ಬ್ಯಾಟರಿಯನ್ನು ಸುಮಾರು 7 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ಬೈಕ್‌ನ ಗರಿಷ್ಠ ವೇಗ ಗಂಟೆಗೆ 110 ಕಿ.ಮೀ.

ಬೈಕ್‌ಗೆ ಬೆಲ್ಟ್ ಅಥವಾ ಚೈನ್ ವ್ಯವಸ್ಥೆಯಿಲ್ಲ. ಬದಲಿಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಹಿಂಬದಿಯ ಚಕ್ರಕ್ಕೆ ಸಂಪರ್ಕಿಸಲಾಗಿದೆ. ಬೈಕ್ ಸಿದ್ಧಪಡಿಸಲು ಸುಮಾರು 3 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಈ ಎಲೆಕ್ಟ್ರಿಕ್‌ ಬುಲೆಟ್‌ ಗಂಟೆಗೆ 110 ಕಿಮೀ ವೇಗದಲ್ಲಿ ಓಡಬಲ್ಲದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...