alex Certify ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳ ದಾಖಲೆಯ ಮಾರಾಟ; ಕಂಪನಿಯ ಅದೃಷ್ಟ ಬದಲಿಸಿದೆ ಈ ಮಾಡೆಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳ ದಾಖಲೆಯ ಮಾರಾಟ; ಕಂಪನಿಯ ಅದೃಷ್ಟ ಬದಲಿಸಿದೆ ಈ ಮಾಡೆಲ್…!

ರಾಯಲ್ ಎನ್‌ಫೀಲ್ಡ್ 350 ಸಿಸಿ ವಿಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಅತ್ಯಧಿಕ ಬೈಕ್‌ಗಳನ್ನು ಮಾರಾಟ ಕೂಡ ಮಾಡ್ತಿದೆ. ಹಬ್ಬದ ಸೀಸನ್‌ಗಳನ್ನೊಳಗೊಂಡ ಅಕ್ಟೋಬರ್ ತಿಂಗಳಿನಲ್ಲಂತೂ ರಾಯಲ್‌ ಎನ್‌ಫೀಲ್ಡ್‌ಗೆ ಬಂಪರ್‌. ಅಕ್ಟೋಬರ್‌ನಲ್ಲಿ ಈ ಕಂಪನಿ ಅತಿ ಹೆಚ್ಚು ಬೈಕ್‌ಗಳನ್ನು ಸೇಲ್‌ ಮಾಡಿದೆ.

ಅಕ್ಟೋಬರ್‌ನಲ್ಲಿ 82,235 ರಾಯಲ್‌ ಎನ್‌ಫೀಲ್ಡ್‌ ಮೋಟಾರ್‌ ಸೈಕಲ್‌ಗಳು ಮಾರಾಟವಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇವಲ 44,133 ಮೋಟಾರ್ ಸೈಕಲ್‌ಗಳು ಬಿಕರಿಯಾಗಿದ್ದವು. ಈ ರೀತಿಯಾಗಿ ರಾಯಲ್‌ ಎನ್‌ಫೀಲ್ಡ್‌, ವರ್ಷದಿಂದ ವರ್ಷಕ್ಕೆ 86 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಸಾಗರೋತ್ತರ ಮಾರುಕಟ್ಟೆಗಳಲ್ಲಿಯೂ ರಾಯಲ್ ಎನ್‌ಫೀಲ್ಡ್ ಹವಾ ಜೋರಾಗಿಯೇ ಇದೆ.

ಅಕ್ಟೋಬರ್‌ನಲ್ಲಿ 5,707 ಮೋಟಾರ್‌ಸೈಕಲ್‌ಗಳನ್ನು ಕಂಪನಿ ರಫ್ತು ಮಾಡಿದೆ. ಕಳೆದ ವರ್ಷದ ಇದೇ ತಿಂಗಳಿನಲ್ಲಿ 3,522 ಬೈಕ್‌ಗಳು ರಫ್ತಾಗಿದ್ದವು. ರಫ್ತು ಪ್ರಮಾಣದಲ್ಲಿ ಕೂಡ ಶೇ.62ರಷ್ಟು ಹೆಚ್ಚಳವಾಗಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಬೈಕ್‌ ಎನಿಸಿಕೊಂಡಿದೆ. ಇತ್ತೀಚೆಗೆ ರಸ್ತೆಗಿಳಿದಿರೋ  ರಾಯಲ್ ಎನ್‌ಫೀಲ್ಡ್ ಹಂಟರ್ 350 ಕೂಡ ಕಡಿಮೆಯೇನಿಲ್ಲ. ಬಿಡುಗಡೆಯಾದ ದಿನದಿಂದಲೂ ಈ ಬೈಕ್ ಗ್ರಾಹಕರನ್ನು ಸೆಳೆಯುತ್ತಿದೆ. ಯಾಕಂದ್ರೆ ಇದು ಕಂಪನಿಯ ಅಗ್ಗದ ಬೈಕ್‌ಗಳಲ್ಲೊಂದು. ಇದರ ಬೆಲೆ ರೂ 1.49 ಲಕ್ಷದಿಂದ ಪ್ರಾರಂಭ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...