ನಿದ್ರಾಹೀನತೆ ಸಮಸ್ಯೆಯನ್ನು ಅನುಭವಿಸಿದವರಿಗೇ ಗೊತ್ತು. ಇದು ಎಷ್ಟು ಕಿರಿ ಕಿರಿ ಮಾಡುತ್ತದೆ ಎಂದು. ಇದರ ನಿವಾರಣೆಗೂ ಹಲವಾರು ಮಾರ್ಗಗಳಿವೆ.
ವಾರಕ್ಕೆ ಒಮ್ಮೆ ಹರಳ್ಳೆಣ್ಣೆಯನ್ನು ಮೈ ಕೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಕಡಿಮೆ ಆಗುತ್ತದೆ. ಇದರಿಂದ ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಬರುತ್ತದೆ.
ಮಲಗುವ ಮುನ್ನ ಬಾಳೆಹಣ್ಣನ್ನು ಸೇವಿಸಬೇಕು. ಇದರಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಮತ್ತು ಕಾರ್ಬೋ ಹೈಡ್ರೇಟ್ ಪ್ರಮಾಣ ಇರುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ ಹಾಗೇ ಮೆದುಳಿಗೆ ವಿಶ್ರಾಂತಿ ನೀಡುತ್ತದೆ.
ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದರಿಂದ ಇದರಲ್ಲಿರುವ ಕ್ಯಾಲ್ಸಿಯಂ ಪ್ರಮಾಣ ನಿದ್ರೆಗೆ ಅಡೆತಡೆ ಆಗದಂತೆ ತಡೆಯುತ್ತದೆ. ಸೌತೆಕಾಯಿ ತಿರುಳನ್ನು ಅಂಗಾಲಿಗೆ 3 ನಿಮಿಷ ಚೆನ್ನಾಗಿ ಉಜ್ಜಿಕೊಂಡರೆ ಚೆನ್ನಾಗಿ ನಿದ್ದೆ ಬರುವುದರ ಜೊತೆಗೆ ದೇಹ ಕೂಡ ತಂಪಾಗಿ ಇರುತ್ತದೆ. ಗಸಗಸೆ ಪಾಯಸ ಮಾಡಿ ಕುಡಿದರೆ ದೇಹ ತಂಪಾಗುವುದಲ್ಲದೆ ಚೆನ್ನಾಗಿ ನಿದ್ದೆಯೂ ಬರುತ್ತದೆ.
ಹುರುಳಿ ಕಾಳನ್ನು ಮೊಳಕೆ ಕಟ್ಟಿ ಸಾರು ಮಾಡಿ ಸೇವಿಸುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ. ಸಬ್ಬಸ್ಸಿಗೆ ಸೊಪ್ಪು ಕೂಡ ನಿದ್ರಾ ಹೀನತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.