alex Certify ರಾತ್ರಿ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಬೇಡಿ: ತಿಂದರೆ ಅಪಾಯ ತಪ್ಪಿದ್ದಲ್ಲ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಬೇಡಿ: ತಿಂದರೆ ಅಪಾಯ ತಪ್ಪಿದ್ದಲ್ಲ….!

ಚಳಿಗಾಲದಲ್ಲಿ ಹಸಿವು ನಮ್ಮನ್ನು ಹೆಚ್ಚಾಗಿ ಕಾಡುತ್ತದೆ. ಈ ರುತುವಿನಲ್ಲಿ ಬಗೆಬಗೆಯ ತರಕಾರಿಗಳು ದೊರೆಯುವುದರಿಂದ ಅವುಗಳನ್ನೇ ನಾವು ಹೆಚ್ಚಾಗಿ ಸೇವಿಸುತ್ತೇವೆ. ಆದರೆ ರಾತ್ರಿ ಮಲಗುವ ಮುನ್ನ ಕೆಲವೊಂದು ನಿರ್ದಿಷ್ಟ ಆಹಾರಗಳನ್ನು ಸೇವನೆ ಮಾಡಬೇಡಿ. ಏಕೆಂದರೆ ಅವು ನಿಮ್ಮ ನಿದ್ರೆಯನ್ನು ಹಾಳುಮಾಡುತ್ತವೆ. ಅಜೀರ್ಣದಂತಹ ಅನೇಕ ಸಮಸ್ಯೆಗಳೂ ಉಂಟಾಗಬಹುದು.

ಟೊಮೆಟೋ: ಮಲಗುವ ಮುನ್ನ ಟೊಮೆಟೊ ತಿನ್ನಬಾರದು. ಇದು ಆಮ್ಲೀಯವಾಗಿದೆ, ಇದನ್ನು ಸೇವಿಸುವುದರಿಂದ ರಾತ್ರಿಯಲ್ಲಿ ನಿಮಗೆ ಅಜೀರ್ಣದ ಸಮಸ್ಯೆ ಉಂಟಾಗಬಹುದು. ಟೊಮೆಟೋದಲ್ಲಿ ಟೈರಮೈನ್ ಇದೆ, ಇದು ಅಮೈನೋ ಆಮ್ಲವಾಗಿದ್ದು, ಮೆದುಳಿನ ಚಟುವಟಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿದ್ರೆಯಲ್ಲಿ ಸಮಸ್ಯೆ ಉಂಟಾಗಬಹುದು.

ಬ್ರೊಕೊಲಿ: ಬ್ರೊಕೊಲಿ ಟ್ರಿಪ್ಟೊಫಾನ್ ಅನ್ನು ಹೊಂದಿರುತ್ತದೆ ಮತ್ತು ಇದು ನಿದ್ರೆಗೆ ಸಹಾಯ ಮಾಡುತ್ತದೆ. ಆದರೆ ನೀವು ಮಲಗುವ ಮುನ್ನ ಹಸಿಯಾಗಿ ಸೇವಿಸಿದರೆ ಅದು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವ ಕಾರಣ ನಿದ್ರೆಗೆ ಅಡಚಣೆಯಾಗುತ್ತದೆ. ಏಕೆಂದರೆ ಬ್ರೊಕೊಲಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಚಿಕನ್‌: ಕೋಳಿ ಮಾಂಸದಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಶಕ್ತಿಯ ಅಗತ್ಯವಿರುತ್ತದೆ. ಚಿಕನ್‌ನಲ್ಲಿ ಪ್ರೋಟೀನ್ ಅಮೈನೋ ಆಸಿಡ್ ಟೈರೋಸಿನ್ ಇರುವುದರಿಂದ ಮೆದುಳಿನ ಚಟುವಟಿಕೆಯು ಹೆಚ್ಚಾಗುತ್ತದೆ. ಹಾಗಾಗಿ ರಾತ್ರಿ ಇದನ್ನು ತಿನ್ನಬೇಡಿ.

ಮಸಾಲೆಯುಕ್ತ ಆಹಾರ: ಮಸಾಲೆ ಭರಿತ ಆಹಾರವನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಪರಿಣಾಮ ಸರಿಯಾಗಿ ನಿದ್ರೆ ಬರುವುದಿಲ್ಲ. ಮಲಗುವ ಮೊದಲು ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ, ಅದು ಉಷ್ಣತೆಯ ಭಾವನೆಯನ್ನು ಉಂಟುಮಾಡುತ್ತದೆ.

ಚೀಸ್‌: ಚೀಸ್‌ನಲ್ಲಿ ಟೈರಮೈನ್ ಎಂಬ ಅಮೈನೋ ಆಮ್ಲ ಸಮೃದ್ಧವಾಗಿದೆ. ಇದರಿಂದಾಗಿ ನಿಮ್ಮ ಮೆದುಳು ದೀರ್ಘಕಾಲ ಕ್ರಿಯಾಶೀಲವಾಗಿರುತ್ತದೆ. ಇದು ನಿಮ್ಮನ್ನು ತೊಂದರೆಗೊಳಿಸಬಹುದು ಮತ್ತು ಈ ಕಾರಣದಿಂದಾಗಿ ನೀವು ದೀರ್ಘಕಾಲದವರೆಗೆ ಎಚ್ಚರವಾಗಿರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...