ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ನೆನಪಿಗಾಗಿ ನಿರ್ಮಿಸಿರುವ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳನ್ನು ಶೀಘ್ರದಲ್ಲೇ ಬಿಬಿಎಂಪಿ ತೆರವು ಮಾಡಲಿದೆ ಎಂದು ತಿಳಿದು ಬಂದಿದೆ.
ಕಾಬೂಲ್ ತೊರೆಯುವ ಮುನ್ನ ಅಮೆರಿಕಾ ಮಾಡಿದೆ ಒಂದೊಳ್ಳೆ ಕೆಲಸ
ಬಿಬಿಎಂಪಿಯಿಂದ ಅನುಮತಿ ಪಡೆಯದೆ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಪುತ್ಥಳಿಗಳನ್ನು ನಿರ್ಮಿಸಿರುವುದರಿಂದ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಮುಂದಾಗಿದೆ.
ಆದಷ್ಟು ಶೀಘ್ರದಲ್ಲೇ ಬಸವಣ್ಣ, ರಾಜ್ ಕುಮಾರ್, ಶಂಕರ್ ನಾಗ್ ಮುಂತಾದ ಮಹಾನ್ ನಾಯಕರ ಪುತ್ಧಳಿ ತೆರವಿಗೆ ಬಿಬಿಎಂಪಿ ಮುಂದಾಗಿದೆ. ಈಗಾಗಲೇ ಈ ಬಗ್ಗೆ ಬಿಬಿಎಂಪಿ ಸರ್ವೆ ಕಾರ್ಯ ಶುರುಮಾಡಿದೆ. ಸರ್ವೆಯಲ್ಲಿ ಅನೇಕ ಪುತ್ಥಳಿಗಳನ್ನು ಗುರುತಿಸಿದ್ದು, ಶೀಘ್ರದಲ್ಲೇ ತೆರವು ಮಾಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.