ಭಾರೀ ಕುತೂಹಲ ಕೆರಳಿಸಿರುವ ಒಕ್ಕಲಿಗ ಸಂಘದ ಅಧ್ಯಕ್ಷರ ಆಯ್ಕೆಗೆ ದಿನಾಂಕ ಫಿಕ್ಸ್ ಆಗಿದೆ. ಡಿಸೆಂಬರ್ 29 ರಂದು ಅಧ್ಯಕ್ಷರ ಆಯ್ಕೆ ನಡೆಯಲಿದ್ದು, 35 ನಿರ್ದೇಶಕರುಗಳಲ್ಲಿ ಅಧ್ಯಕ್ಷ ಪಟ್ಟ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಕಳೆದೆರಡು ತಿಂಗಳಿಂದ ಕಳೆಯೇರಿದ್ದ ಚುನಾವಣೆಯ ಫಲಿತಾಂಶ ಈಗಾಗ್ಲೇ ಹೊರಬಿದ್ದಿದ್ದು, ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಡಾ.ಆಂಜನಪ್ಪ ಗೆಲುವಿನ ಗಾಧಿ ಏರಿದ್ದಾರೆ.
ಒಮಿಕ್ರಾನ್ ಭೀತಿ: ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ ಮಹಾನಗರ ಪಾಲಿಕೆ ಫುಲ್ ಅಲರ್ಟ್
ಕಾರ್ಯಕಾರಿ ಸಮಿತಿಗೆ ಈಗಾಗಲೇ ಚುನಾವಣೆ ನಡೆದಿದ್ದು, ರಾಜ್ಯಾದ್ಯಂತ 35 ನಿರ್ದೇಶಕ ಸ್ಥಾನದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಡಿಸೆಂಬರ್ 12 ರಂದು ಚುನಾವಣೆ ನಡೆದು ಡಿಸೆಂಬರ್ 15 ರಂದು ಫಲಿತಾಂಶ ಹೊರಬಿದ್ದಿತ್ತು. ಈ ವಿಭಾಗದಲ್ಲಿ, ಕೆಂಚಪ್ಪಗೌಡ ಸಿಂಡಿಕೇಟ್ ನಲ್ಲಿ 10 ನಿರ್ದೇಶಕರು ಗೆದ್ದಿದ್ದಾರೆ.
ರಾಜ್ಯಾದ್ಯಂತ 35 ನಿರ್ದೇಶಕರಲ್ಲಿ ಒಬ್ಬರನ್ನ ಆಯ್ಕೆ ಮಾಡಲು ಅವಕಾಶವಿದ್ದು, ಅಧ್ಯಕ್ಷರ ಆಯ್ಕೆಗೆ ಮ್ಯಾಜಿಕ್ ನಂಬರ್ 19. ಡಿಸೆಂಬರ್ 29ರಂದು ಸಂಘದ ಆಡಳಿತ ಭವನದಲ್ಲೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು. ಈಗಿರುವ ಸಂಘದ ಆಡಳಿತಾಧಿಕಾರಿ ಕರಿಗೌಡ ಹಾಗೂ ಚುನಾವಣಾಧಿಕಾರಿ ರವೀಂದ್ರ ನೇತೃತ್ವದಲ್ಲಿ ನಡೆಯಲಿದೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.