alex Certify ಒಮಿಕ್ರಾನ್‌ ಭೀತಿ: ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ ಮಹಾನಗರ ಪಾಲಿಕೆ ಫುಲ್‌ ಅಲರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್‌ ಭೀತಿ: ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ ಮಹಾನಗರ ಪಾಲಿಕೆ ಫುಲ್‌ ಅಲರ್ಟ್

ಒಮಿಕ್ರಾನ್ ಬಗ್ಗೆ ಕೇಂದ್ರ ಪತ್ರ ಬರೆದ ಹಿನ್ನೆಲೆ ಪಾಲಿಕೆ ಅಲರ್ಟ್ ಆಗಿದೆ. ಮೂರನೇ ಅಲೆ ಭೀತಿಯಿಂದ ರಾಜ್ಯಕ್ಕೆ ಕೇಂದ್ರದಿಂದ ಖಡಕ್ ಸೂಚನೆ ಬಂದಿದೆ. ಹೀಗಾಗಿ ಬೆಂಗಳೂರು ಮಹಾನಗರ ಪಾಲಿಕೆ ಆ್ಯಕ್ಟೀವ್ ಆಗಿ ಕಾರ್ಯ ನಿರ್ವಹಿಸಲು ಮುಂದಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತ ಪಾಲಿಕೆ ಕಣ್ಗಾವಲು ಇಟ್ಟಿದ್ದು, ದೇವನಹಳ್ಳಿ, ಏರ್ಪೋರ್ಟ್ ಸುತ್ತ ಇರುವ ಹೋಟೆಲ್, ಲಾಡ್ಜ್, ರೆಸಾರ್ಟ್ ಗಳ ಮಾಹಿತಿ ಕಲೆಹಾಕಲು ಪಾಲಿಕೆ ನಿರ್ಧಾರ ಮಾಡಿದೆ.

ತಂದೆ ಮನೆಯಲ್ಲಿ ವಾಸಿಸಲು ಮಗನಿಗೆ ಅಧಿಕಾರವಿಲ್ಲ: ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ಆದೇಶ

ಏರ್ಪೋರ್ಟ್ ಸುತ್ತಮುತ್ತ ಇರುವ ಎಲ್ಲಾ ರೆಸಾರ್ಟ್, ಹೋಟೆಲ್ ಗಳ ಮಾಹಿತಿ ನೀಡುವಂತೆ ಬಿಬಿಎಂಪಿ ಕೇಳಿದೆ. ಅಕಸ್ಮಾತ್ ಕೇಸ್ ಹೆಚ್ಚಳವಾದರೆ ನಗರದ ಬದಲು ಏರ್ಪೋರ್ಟ್ ಸುತ್ತಮುತ್ತಲೇ ಸೋಂಕಿತರ ಕ್ವಾರಂಟೈನ್ ಮಾಡಲು ಬಿಬಿಎಂಪಿ ಮುಂದಾಗಿದೆ.

ಈ ಹಿಂದೆಯೂ ಹೊಟೇಲ್ ಗಳನ್ನ ಸ್ಟೆಪ್ ಡೌನ್ ಆಸ್ಪತ್ರೆಗಳನ್ನಾಗಿ ಟ್ರೀಟ್ಮೆಂಟ್ ನೀಡಿದ್ದ ಪಾಲಿಕೆ ಇಂಥದ್ದೊಂದು ಎಕ್ಸ್ಪೆರಿಮೆಂಟ್ ಗೆ ಮತ್ತೆ ಕೈ ಹಾಕಿದ. ಅಲ್ಲದೆ ಟೆಸ್ಟ್ ಸಂಖ್ಯೆಯನ್ನು ಹೆಚ್ಚಿಸಲು ಪಾಲಿಕೆ ನಿರ್ಧರಿಸಿದ್ದು, ಫೀಲ್ಡ್ ಆಫೀಸರ್ಸ್ ಗಳು ಕಾರ್ಯೋನ್ಮುಖರಾಗಿ ಎಂದು ಸೂಚಿಸಿದೆ.

ಒಮಿಕ್ರಾನ್ ಬಗ್ಗೆ ಆತಂಕ ವ್ಯಕ್ತಪಡಿಸಿ ರಾಷ್ಟ್ರೀಯ ಆರೋಗ್ಯಾಧಿಕಾರಿ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದು, ಸ್ಥಳೀಯ ಮಟ್ಟದಿಂದ ಕಾರ್ಯೋನ್ಮುಖರಾಗಬೇಕು ಎಂದಮೇಲೆ ಬಿಬಿಎಂಪಿ ಈ ಪರಿಹಾರ ಕಂಡುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...