
ವರದಿಗಳ ಪ್ರಕಾರ, ರಷ್ಯಾದ ಸೈನಿಕರು ದಿಕ್ಕು ಕೇಳವುದಕ್ಕಾಗಿ ತಮ್ಮ , ಟ್ಯಾಂಕ್‌ಗಳನ್ನು ನಿಲ್ಲಿಸಿದ್ದಾರೆ. ಇದನ್ನರಿತ ಸ್ಥಳೀಯರು ಪುಟಿನ್ ಸೈನ್ಯ ಕೈವ್ ಕಡೆಗೆ ಚಲಿಸದಂತೆ ತಡೆದಿದ್ದಾರೆ. ಚೆರ್ನಿಹಿವ್ ಪ್ರದೇಶದ ಕೊರ್ಯುಕಿವ್ಕಾ ಪಟ್ಟಣದ ಹೊರವಲಯದಲ್ಲಿ ನಾಗರಿಕರು ರಷ್ಯಾ ಸೈನ್ಯಕ್ಕೆ ತಡೆ ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದು, 800ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಸ್ವೀಕರಿಸಿದೆ.
ಭಾನುವಾರ ತೆಗೆದ ಉಪಗ್ರಹ ಚಿತ್ರಗಳು ಸುಮಾರು 64 ಕಿ.ಮೀ ದೂರದಲ್ಲಿರುವ ಕೈವ್‌ನ ದಿಕ್ಕಿನಲ್ಲಿ ಟ್ಯಾಂಕ್‌ಗಳು ಸೇರಿದಂತೆ ರಷ್ಯಾದ ಭೂಪಡೆಗಳ ದೊಡ್ಡ ನಿಯೋಜನೆಯನ್ನು ತೋರಿಸಿದೆ. ಮ್ಯಾಕ್ಸರ್ ಟೆಕ್ನಾಲಜೀಸ್ ಇಂಕ್ ಬಿಡುಗಡೆ ಮಾಡಿದ ಚಿತ್ರಗಳು, ರಷ್ಯಾದ ಮಿಲಿಟರಿ ವಾಹನಗಳ ನಿಯೋಜನೆಯನ್ನು ತೋರಿಸಿದೆ. ನಿಯೋಜನೆಯು ಐದು ಕಿ.ಮೀ.ಗಳಷ್ಟು ವಿಸ್ತರಿಸಿದೆ.