alex Certify ರಷ್ಯಾ ವಿಮಾನ ಹೊಡೆದುರುಳಿಸಿ, ಪೈಲಟ್‌ ವಶಕ್ಕೆ ಪಡೆದ ಉಕ್ರೇನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾ ವಿಮಾನ ಹೊಡೆದುರುಳಿಸಿ, ಪೈಲಟ್‌ ವಶಕ್ಕೆ ಪಡೆದ ಉಕ್ರೇನ್

ಶನಿವಾರ ಉಕ್ರೇನಿಯನ್ ವಾಯು ರಕ್ಷಣಾ ಪಡೆ ರಷ್ಯಾದ ವಿಮಾನವನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಅಷ್ಟೇ ಅಲ್ಲಾ ಚೆರ್ನಿಹಿವ್ ಹೊರವಲಯದಲ್ಲಿ ಉಕ್ರೇನ್ ಪಡೆ ಹೊಡೆದುರುಳಿಸಿದ ವಿಮಾನದ ಪೈಲಟ್ ಅನ್ನು ಸಹ ವಶಪಡಿಸಿಕೊಂಡಿದೆ ಎಂದು ಮಾಹಿತಿ ನೀಡಿದೆ.

ಈ ಘಟನೆಯಿಂದ ಮೇಜರ್ ಕ್ರಿವೊಲಾಪೋವ್ ಎಂದು ಗುರುತಿಸಲಾದ ಸಹ-ಪೈಲಟ್ ಸಾವನ್ನಪ್ಪಿದ್ದಾರೆ, ಎಂದು ವರದಿಯಾಗಿದೆ. ಉಕ್ರೇನ್ ರಕ್ಷಣಾ ಸಚಿವಾಲಯವು ಬದುಕುಳಿದ ಪೈಲಟ್‌ನನ್ನು ಜೆಟ್‌ನಿಂದ ಹೊರಹಾಕುವ ವೀಡಿಯೊವನ್ನು ಹಂಚಿಕೊಂಡಿದ್ದು, ಅವರನ್ನು ಕ್ರಾಸ್ನೊಯಾರ್ಟ್ಸೆವ್ ಎಂದು ಗುರುತಿಸಲಾಗಿದೆ.

ಉಕ್ರೇನ್‌ನ ಚೆರ್ನಿಹಿವ್ ಪ್ರದೇಶದಲ್ಲಿ ರಷ್ಯಾದ ವಾಯು ದಾಳಿಯಿಂದ ಭೀಕರ ಪರಿಸ್ಥಿತಿ ಸೃಷ್ಟಿಯಾಗಿದೆ.‌‌ ದಾಳಿ ನಡೆದ ಸ್ಥಳಗಳಿಂದ ಕನಿಷ್ಠ 22 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಕ್ರೇನಿಯನ್ ತುರ್ತು ಸೇವೆಗಳು ಆನ್‌ಲೈನ್ ಪೋಸ್ಟ್‌ನಲ್ಲಿ ತಿಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...