alex Certify ರಷ್ಯಾ ಮಿಲಿಟರಿ ವಾಹನಗಳ ಮೇಲಿನ ‘Z’ ಚಿಹ್ನೆ ಹಿಂದಿದೆ ಈ ಅರ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾ ಮಿಲಿಟರಿ ವಾಹನಗಳ ಮೇಲಿನ ‘Z’ ಚಿಹ್ನೆ ಹಿಂದಿದೆ ಈ ಅರ್ಥ

ಕೈವ್: ಉಕ್ರೇನ್‌ನಲ್ಲಿ ಟ್ಯಾಂಕ್‌ಗಳು ಮತ್ತು ರಷ್ಯಾದ ಮಿಲಿಟರಿ ವಾಹನಗಳು ಸಾಮಾನ್ಯವಾಗಿವೆ. ಉಕ್ರೇನ್ ವಿರುದ್ಧ ರಷ್ಯಾದ ಯುದ್ಧವು 13 ದಿನಗಳ ಹಿಂದೆ ಪ್ರಾರಂಭವಾದಾಗಿನಿಂದ, ಮಿಲಿಟರಿ ವಾಹನಗಳು ಕೈವ್ ಮತ್ತು ಇತರ ಉಕ್ರೇನಿಯನ್ ನಗರಗಳ ಬಳಿ ತಮ್ಮ ಸೈನ್ಯದ ವಾಹನಗಳ ಮೇಲೆ Z (ಝೆಡ್) ಗುರುತು ಹಾಕಿಕೊಂಡು ಸುತ್ತಾಡುತ್ತಿವೆ.

ಸಾಮಾಜಿಕ ಮಾಧ್ಯಮವು ಬಿಳಿ ಬಣ್ಣದ ಝೆಡ್ ಚಿಹ್ನೆಯ ಚಿತ್ರಗಳಿಂದ ತುಂಬಿ ಹೋಗಿದೆ. ದಪ್ಪ ಅಕ್ಷರದಲ್ಲಿ ಝೆಡ್ ಅನ್ನು ಬರೆಯಲಾಗಿದೆ. ಅನೇಕ ಪ್ರತಿಭಟನಾಕಾರರು, ವಿಶೇಷವಾಗಿ ರಷ್ಯಾವನ್ನು ಬೆಂಬಲಿಸುವವರು, ಅವುಗಳನ್ನು ಟೀ ಶರ್ಟ್‌ಗಳಲ್ಲಿ ಧರಿಸಿರುವುದು ಕಂಡುಬಂದಿದೆ.

Z’ ಚಿಹ್ನೆಯ ಅರ್ಥವೇನು ?

ಗಲಿನಾ ಸ್ಟಾರೊವೊಯ್ಟೊವಾ ಫೆಲೋ ಕಾಮಿಲ್ ಗಲೀವ್ ಪ್ರಕಾರ, Z ಎಂಬುದು ರಷ್ಯಾದ ಮಿಲಿಟರಿಯು ಉಕ್ರೇನ್‌ಗೆ ಹೊರಡುವ ತಮ್ಮ ವಾಹನಗಳ ಮೇಲೆ ಹಾಕುತ್ತಿರುವ ಅಕ್ಷರವಾಗಿದೆ. ಕೆಲವರು Z ಅನ್ನು ಝಾ ಪೊಬಿದಿ (ಗೆಲುವಿಗಾಗಿ) ಎಂದು ವ್ಯಾಖ್ಯಾನಿಸುತ್ತಾರೆ. ವಿದ್ವಾಂಸರು ಇದನ್ನು ಝಾಪಡ್ (ಪಶ್ಚಿಮ) ಎಂದು ಹೇಳಿದ್ದಾರೆ.

ಕೆಲವೇ ದಿನಗಳ ಹಿಂದೆ ಕಂಡುಹಿಡಿದ ಈ ಚಿಹ್ನೆಯು ರಷ್ಯಾದ ಹೊಸ ಸಿದ್ಧಾಂತ ಮತ್ತು ರಾಷ್ಟ್ರೀಯ ಗುರುತಿನ ಸಂಕೇತವಾಯಿತು ಎಂದು ಗಲೀವ್ ಹೇಳಿದ್ದಾರೆ. ಈ ಚಿಹ್ನೆಯನ್ನು ಅನೇಕರು ಬೆಂಬಲಿಸಿದ್ದಾರೆ. ಅನೇಕ ರಷ್ಯಾದ ನಾಗರಿಕರು ಮತ್ತು ವ್ಯಾಪಾರ ಮಾಲೀಕರು ತಮ್ಮ ಕಾರುಗಳ ಮೇಲೆ ಝಡ್ ಅಕ್ಷರವನ್ನು ಹಾಕುತ್ತಿದ್ದಾರೆ.

ಈ ಚಿಹ್ನೆಗಳು ಘಟಕ ಅಥವಾ ವಾಹನಗಳ ಸ್ಥಳವನ್ನು ತಿಳಿಸುತ್ತವೆ ಎಂದು ರಕ್ಷಣಾ ಥಿಂಕ್ ಟ್ಯಾಂಕ್ ಆಪ್ ಯುಎಸ್ಐನ ಮಾಜಿ ನಿರ್ದೇಶಕ ಪ್ರೊಫೆಸರ್ ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.

ಚಿಹ್ನೆಯನ್ನು ಮೊದಲು ಗುರುತಿಸಿದ್ದು ಎಲ್ಲಿ ?

Z ಚಿಹ್ನೆಯನ್ನು ಮೊದಲು ಫೆಬ್ರವರಿ 22 ರಂದು ಡೊನೆಟ್ಸ್ಕ್ ಪ್ರದೇಶಕ್ಕೆ ಪ್ರವೇಶಿಸಿದ ರಷ್ಯಾದ ವಾಹನಗಳಲ್ಲಿ ಗುರುತಿಸಲಾಯಿತು. ಪದಾತಿ ಸೈನ್ಯವನ್ನು ಚಿತ್ರಿಸಲು ಚಿಹ್ನೆಯು ಒಂದು ಮಾರ್ಗವಾಗಿದೆ ಎಂದು ಹೇಳುವ ಟ್ವೀಟ್‌ಗಳಿವೆ.

ದಿ ಇಂಡಿಪೆಂಡೆಂಟ್ ಪ್ರಕಾರ, 2014 ರಲ್ಲಿ ರಷ್ಯಾದಿಂದ ಸ್ವಾಧೀನಪಡಿಸಿಕೊಂಡಾಗ ಕ್ರೈಮಿಯಾದಲ್ಲಿನ ವಾಹನಗಳ ಮೇಲೆ Z ಚಿಹ್ನೆ ಕಾಣಿಸಿಕೊಂಡಿದೆ.

ಉಕ್ರೇನ್ ಯುದ್ಧದಲ್ಲಿ ಗೋಚರಿಸುವ ಇತರ ಚಿಹ್ನೆಗಳು ಯಾವುವು ?

Z ಅನ್ನು ಹೊರತುಪಡಿಸಿ, ರಷ್ಯಾದ ಮಿಲಿಟರಿ ವಾಹನಗಳ ಮೇಲೆ ಚಿತ್ರಿಸಿದ ಇತರ ಚಿಹ್ನೆಗಳು ಎರಡೂ ಬದಿಗಳಲ್ಲಿ ಎರಡು ಗೆರೆಗಳನ್ನು ಹೊಂದಿರುವ ತ್ರಿಕೋನ, ಒಳಗೆ ಮೂರು ಚುಕ್ಕೆಗಳನ್ನು ಹೊಂದಿರುವ ವೃತ್ತ ಮತ್ತು ಒಳಗೆ ಸಣ್ಣ ತ್ರಿಕೋನವನ್ನು ಹೊಂದಿರುವ ದೊಡ್ಡ ತ್ರಿಕೋನ. ಆದರೆ, ರಷ್ಯಾದ ಮಿಲಿಟರಿ ಅಧಿಕಾರಿಗಳು ಮಾತ್ರ ಅಧಿಕೃತವಾಗಿ ಚಿಹ್ನೆಗಳ ಬಗ್ಗೆ ಇದುವರೆಗೆ ಮಾಹಿತಿ ನೀಡಿಲ್ಲ.

ಇನ್ನು ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಇದುವರೆಗೆ 1.5 ದಶಲಕ್ಷಕ್ಕೂ ಹೆಚ್ಚು ಜನರು ದೇಶದಿಂದ ಪಲಾಯನ ಮಾಡಿದ್ದಾರೆ. ಎರಡನೇ ಮಹಾಯುದ್ಧದ ನಂತರ ಯುರೋಪ್‌ನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಿರಾಶ್ರಿತರ ಬಿಕ್ಕಟ್ಟು ಎಂದು ಅಮೆರಿಕಾ ಕರೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...