ರಷ್ಯಾ ಒಡೆತನದ ವಿಹಾರ ನೌಕೆ ವಶಪಡಿಸಿಕೊಂಡ ಯುಕೆ..! 30-03-2022 11:47AM IST / No Comments / Posted In: Latest News, Live News, International ಯುಕೆ ಸರ್ಕಾರವು ರಷ್ಯಾ ಒಡೆತನದ 50 ಮಿಲಿಯನ್ ಡಾಲರ್ ಮೌಲ್ಯದ ಸೂಪರ್ ಯಾಚ್ ಅನ್ನು ಮಂಗಳವಾರ ವಶಪಡಿಸಿಕೊಂಡಿದೆ. ವಿಹಾರ ನೌಕೆ ಫಿ ಕೆರಿಬಿಯನ್ ಸಂಸ್ಥೆಯೊಂದಕ್ಕೆ ನೋಂದಾಯಿಸಲ್ಪಟ್ಟಿದೆ. ಆದರೆ ಅದರ ಮೂಲವನ್ನು ಮರೆಮಾಡಲು ಮಾಲ್ಟೀಸ್ ಧ್ವಜವನ್ನು ಹೊತ್ತೊಯ್ದಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ರಷ್ಯಾದ ಉದ್ಯಮಿಯ 50 ಮಿಲಿಯನ್ ಡಾಲರ್ ಮೌಲ್ಯದ ಸೂಪರ್‌ಯಾಚ್ ಅನ್ನು ಯುಕೆ ವಶಪಡಿಸಿಕೊಂಡಿದೆ ಎಂದು ಸರ್ಕಾರ ಹೇಳಿದೆ. ಇದು ಯುಕೆ ಸಮುದ್ರದಲ್ಲಿ ಬಂಧಿಸಲ್ಪಟ್ಟ ಮೊದಲ ಸೂಪರ್‌ಯಾಚ್ ಆಗಿದೆ ಎಂದು ಹೇಳಲಾಗಿದೆ. ಫಿ ಎಂದು ಕರೆಯಲ್ಪಡುವ 192 ಅಡಿ ಉದ್ದದ ಹಡಗನ್ನು ಅಧಿಕಾರಿಗಳು ಪೂರ್ವ ಲಂಡನ್‌ನ ಕ್ಯಾನರಿ ವಾರ್ಫ್‌ನಲ್ಲಿ ವಶಪಡಿಸಿಕೊಂಡಿದ್ದಾರೆ. ಸೂಪರ್‌ಯಾಚ್ ಪ್ರಶಸ್ತಿ ಸಮಾರಂಭಕ್ಕಾಗಿ ಫಿ ಲಂಡನ್‌ನಲ್ಲಿತ್ತು. ಮಂಗಳವಾರ ಮಧ್ಯಾಹ್ನ ನೌಕಾಯಾನ ಮಾಡಲು ಯೋಜಿಸಲಾಗಿತ್ತು. ಇನ್ನು ಈ ಸೂಪರ್‌ಯಾಚ್ ಮಾಲೀಕರ ಹೆಸರನ್ನು ಯುಕೆ ಬಹಿರಂಗಪಡಿಸಿಲ್ಲ. ವ್ಯಕ್ತಿಯು ರಷ್ಯಾದ ಉದ್ಯಮಿ ಎಂದಷ್ಟೇ ಹೇಳಿದೆ. ಹಾಗೂ ರಷ್ಯಾ ವಿರುದ್ಧದ ನಿರ್ಬಂಧಗಳ ಭಾಗವಾಗಿ ವಿಹಾರ ನೌಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಕೆರಿಬಿಯನ್‌ನ ಸೇಂಟ್ ಕಿಟ್ಸ್ ಮತ್ತು ನೆವಿಸ್ ಮೂಲದ ಕಂಪನಿಗೆ ವಿಹಾರ ನೌಕೆಯನ್ನು ನೋಂದಾಯಿಸಲಾಗಿದೆ. ಅದರ ಮೂಲವನ್ನು ಮರೆಮಾಡಲು ಮಾಲ್ಟೀಸ್ ಧ್ವಜವನ್ನು ಹೊತ್ತೊಯ್ದಿದೆ. ಮಾರ್ಚ್ 13 ರಂದು ಫಿ ಯು ರಷ್ಯಾ ಮೂಲದ್ದು ಎಂದು ಆರಂಭದಲ್ಲಿ ಗುರುತಿಸಲಾಯಿತು. ನಂತರ ಈ ಬಗ್ಗೆ ತನಿಖೆ ನಡೆಸಿದ್ದು, ವಿಹಾರ ನೌಕೆಯನ್ನು ವಶಪಡಿಸಿಕೊಳ್ಳಲಾಯಿತು. 🚨BREAKING: Russian superyacht detained. I have worked closely with @NCA_UK & the @UKBorder’s Maritime investigation Bureau to intercept the £38m – Phi. This Government will continue to take robust action against anyone benefiting from connections to Putin’s regime. pic.twitter.com/enp9M2tmBB — Rt Hon Grant Shapps MP (@grantshapps) March 29, 2022