alex Certify ರಷ್ಯಾ – ಉಕ್ರೇನ್‌ ಯುದ್ಧ: ಹಳೆ ಫೋಟೋ ಮೂಲಕ ವೈರಲ್‌ ಆದ ಶಶಿ ತರೂರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾ – ಉಕ್ರೇನ್‌ ಯುದ್ಧ: ಹಳೆ ಫೋಟೋ ಮೂಲಕ ವೈರಲ್‌ ಆದ ಶಶಿ ತರೂರ್‌

ಉಕ್ರೇನ್‌ ಮೇಲೆ ರಷ್ಯಾ ನಡೆಸಿರುವ ವ್ಯಾಪಕ ದಾಳಿ ಇಡೀ ಜಗತ್ತಿನ ಕಣ್ಣನ್ನೇ ಕೆಂಪಗಾಗಿಸಿದೆ. ಉಕ್ರೇನ್‌ ಪ್ರಜೆಗಳ ಸಾವು-ನೋವನ್ನು ಕಂಡು ಎಲ್ಲರೂ ಕಣ್ಣೀರಾಗ್ತಿದ್ದಾರೆ. ಇನ್ನೊಂದೆಡೆ ಅಲ್ಲಿನ ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಗಳಿಗೆ ಕಣ್ಣೀರಿನ ವಿದಾಯ ಹೇಳುವ ಹೃದಯ ವಿದ್ರಾವಕ ಫೋಟೋಗಳು ಮತ್ತು ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡ್ತಾ ಇವೆ.

ಉಕ್ರೇನ್‌ನ ಸುರಂಗಮಾರ್ಗ ನಿಲ್ದಾಣದಲ್ಲಿ ದಂಪತಿ ಪರಸ್ಪರ ವಿದಾಯ ಹೇಳುವ  ಫೋಟೋ, ಮಗಳನ್ನು ತಬ್ಬಿ ಅಳುವ ತಂದೆ ಹೀಗೆ ಸಾಕಷ್ಟು ದೃಶ್ಯಗಳು ಅತ್ಯಂತ ನೋವಿನಿಂದ ಕೂಡಿವೆ.

ಈ ಮಧ್ಯೆ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಕೂಡ ಫೋಟೋ ಒಂದನ್ನು ಶೇರ್‌ ಮಾಡಿದ್ದಾರೆ. ಯುವಕ – ಯುವತಿ ಜೊತೆಯಾಗಿ ನಿಂತಿರುವ ಫೋಟೋ ಇದು. ಯುವಕ ಉಕ್ರೇನ್‌ ಧ್ವಜವನ್ನು ಹೊದ್ದುಕೊಂಡಿದ್ರೆ, ಯುವತಿ ರಷ್ಯಾ ಧ್ವಜವನ್ನು ಧರಿಸಿದ್ದಾಳೆ.

ಆದ್ರೆ ಇದು ಯುದ್ಧಪೀಡಿತ ಉಕ್ರೇನ್‌ ನ ಸದ್ಯದ ಭಾವಚಿತ್ರವಲ್ಲ. 2019ರ ಕಾನ್ಸರ್ಟ್‌ ಒಂದರಲ್ಲಿ ಕ್ಲಿಕ್ಕಿಸಿದ್ದು. ಅದನ್ನು ಟ್ವಿಟ್ಟರ್‌ ನಲ್ಲಿ ಹಾಕುವ ಮೂಲಕ ಶಾಂತಿ ಸಂದೇಶ ಸಾರಲು ತರೂರ್‌ ಪ್ರಯತ್ನ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...