alex Certify ರಷ್ಯಾ- ಉಕ್ರೇನ್​ ನಡುವಿನ ಯುದ್ಧದ ನಡುವೆಯೇ ಇಂಟರ್ನೆಟ್​ನಲ್ಲಿ ಧೂಳೆಬ್ಬಿಸುತ್ತಿದೆ ಈ ಹಳೆ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾ- ಉಕ್ರೇನ್​ ನಡುವಿನ ಯುದ್ಧದ ನಡುವೆಯೇ ಇಂಟರ್ನೆಟ್​ನಲ್ಲಿ ಧೂಳೆಬ್ಬಿಸುತ್ತಿದೆ ಈ ಹಳೆ ವಿಡಿಯೋ….!

ಉಕ್ರೇನ್​ನ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಳ್ಳುವ ಮುನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒಬ್ಬ ಕಾಮಿಡಿಯನ್​ ಹಾಗೂ ನಟರಾಗಿದ್ದರು.

2006ರಲ್ಲಿ ಇವರು ಭಾರೀ ಖ್ಯಾತಿಯನ್ನು ಗಳಿಸಿದವರಾಗಿದ್ದರು ಎಂಬುದಕ್ಕೆ ಇದೀಗ ಸಾಕ್ಷ್ಯ ಕೂಡ ದೊರಕಿದೆ.

ಹೌದು..! ಉಕ್ರೇನ್​ ಹಾಗೂ ರಷ್ಯಾದ ನಡುವೆ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ವೊಲೊಡಿಮಿರ್​​ ಝೆಲೆನ್ಸ್ಕಿಯ ಹಳೆಯ ವಿಡಿಯೋವೊಂದು ವೈರಲ್​ ಆಗಿದೆ.
2006ರಲ್ಲಿ ವೊಲೊಡಿಮಿರ್​ ಟೆಲಿವಿಷನ್​ ಶೋ ಡ್ಯಾನ್ಸಿಂಗ್​ ವಿತ್​ ಸ್ಟಾರ್ಸ್​ನಲ್ಲಿ ಭಾಗವಹಿಸಿದ್ದರು. ಅಲ್ಲದೇ ಈ ಶೋನ ವಿಜೇತ ಕೂಡ ಎನಿಸಿದ್ದರು. ಈ ಟೆಲಿವಿಷನ್​ ಶೋನಲ್ಲಿ ತಮ್ಮ ಡ್ಯಾನ್ಸಿಂಗ್​ ಪಾರ್ಟ್ನರ್​ ಒಲೆನಾ ಶೊಪ್ಟೆಂಕೊ ಜೊತೆಯಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ವೊಲೊಡಿಮಿರ್​​ ಅತ್ಯಂತ ಅದ್ಭುತವಾಗಿ ನೃತ್ಯ ಪ್ರದರ್ಶಿಸಿದ್ದಾರೆ. 2006ರಲ್ಲಿ ಡ್ಯಾನ್ಸಿಂಗ್​ ವಿತ್​ ಸ್ಟಾರ್ಸ್​ ರಿಯಾಲಿಟಿ ಶೋನ ಉಕ್ರೇನಿಯನ್ನ ಆವೃತ್ತಿಯಲ್ಲಿ ವೊಲೊಡಿಮಿರ್​ ವಿಜೇತರಾಗಿದ್ದರು ಎಂದು ಈ ವೈರಲ್​ ಪೋಸ್ಟ್​ಗೆ ಶೀರ್ಷಿಕೆಯನ್ನು ನೀಡಲಾಗಿದೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಉಕ್ರೇನಿಯನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಹಾಡಿ ಹೊಗಳಿದ ನೆಟ್ಟಿಗರು ಅನೇಕರು ಇವರನ್ನು ತಮ್ಮ ಕ್ರಶ್​ ಎಂದಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...