ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ನ ವಿರುದ್ಧ ಯುದ್ಧ ಘೋಷಣೆ ಮಾಡಿ ಐದನೇ ದಿನವಾದ ಇಂದು ಸಹ ಉಕ್ರೇನ್ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಉಕ್ರೇನ್ ನೀಡಿರುವ ಮಾಹಿತಿಯ ಪ್ರಕಾರ ಉಕ್ರೇನ್ನಲ್ಲಿ ಈವರೆಗೆ 352 ಮಂದಿ ಸಾವನ್ನಪ್ಪಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಉಕ್ರೇನ್ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ರಷ್ಯಾದ ಪಡೆಗಳು ಉಕ್ರೇನ್ನ ಮೇಲೆ ಆಕ್ರಮಣದ ತೀವ್ರತೆಯನ್ನು ಕಡಿಮೆ ಮಾಡಿವೆ ಎಂದು ಮಾಹಿತಿ ನೀಡಿದ್ದಾರೆ. ರಷ್ಯಾದ ಮಿಲಿಟರಿ ಪಡೆಯು ಉಕ್ರೇನ್ನ ಎಲ್ಲಾ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದೆ. ಆದರೆ ಮಿಲಿಟರಿ ಕಾರ್ಯಾಚರಣೆಯ ಮೂಲಕ ರಷ್ಯಾವು ಯಾವ ಗುರಿಯನ್ನು ಸಾಧಿಸಬೇಕು ಎಂದುಕೊಂಡಿತ್ತೋ ಆ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ಉಕ್ರೇನಿಯನ್ ಬ್ರಿಗೇಡ್ಗಳಲ್ಲಿ ಫಿರಂಗಿಯ ದಾಳಿಯು ಶತ್ರು ರಾಷ್ಟ್ರದ ಐದಕ್ಕೂ ಹೆಚ್ಚು ಭಾರೀ ಶಸ್ತ್ರಾಸ್ತ್ರಗಳು ಹಾಗೂ ಸೇನಾ ಶಕ್ತಿಯನ್ನು ನಾಶಪಡಿಸಿದೆ. ರಷ್ಯಾವು ಹತಾಶವಾಗುತ್ತಿದೆ. ಹಾಗೂ ಭಾರೀ ನಷ್ಟವನ್ನು ಅನುಭವಿಸುತ್ತಿದೆ. ಇಲ್ಲಿನ ವಾಸ್ತವ ಬೇರೆಯದ್ದೇ ಇದೆ ಎಂಬುದನ್ನು ರಷ್ಯಾ ಅರಿತುಕೊಂಡಿದೆ. ರಷ್ಯಾ ಇದೀಗ ಉಕ್ರೇನ್ಗೆ ಹೆದರಲು ಆರಂಭಿಸಿದೆ ಎಂದು ಹೇಳಿದ್ದಾರೆ