ರಷ್ಯಾವು ದೊಡ್ಡ ಮಟ್ಟದಲ್ಲಿ ಫಿರಂಗಿ ದಾಳಿ ನಡೆಸಿದ ಪರಿಣಾಮ ದಕ್ಷಿಣ ನಗರವಾದ ಮೈಕೋಲೈವ್ನಲ್ಲಿ ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ಹಲವಾರು ವಸತಿ ಕಟ್ಟಡಗಳಿಗೆ ಹಾನಿ ಉಂಟಾಗಿದೆ ಎಂದು ಉಕ್ರೇನ್ನ ಅಧಿಕಾರಿಗಳು ಆರೋಪಿಸಿದ್ದಾರೆ.
ಆಸ್ಪತ್ರೆಯ ಮುಖ್ಯ ವೈದ್ಯ ಮ್ಯಾಕ್ಸಿಮ್ ಬೆಜ್ನೆಸೆಂಕೋ ಈ ವಿಚಾರವಾಗಿ ಮಾತನಾಡಿದ್ದು ದಾಳಿಯ ಸಮಯದಲ್ಲಿ ನೂರಾರು ರೋಗಿಗಳು ಆಸ್ಪತ್ರೆಯಲ್ಲಿದ್ದರು. ಆದರೆ ಅದೃಷ್ಟವಶಾತ್ ದಾಳಿಯಿಂದಾಗಿ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಕಟ್ಟಡಕ್ಕೆ ಹಾನಿಯುಂಟಾಗಿದೆ ಹಾಗೂ ಕಿಟಕಿಗಳು ಸ್ಫೋಟಗೊಂಡಿವೆ ಎಂದು ಹೇಳಿದರು.
ರಷ್ಯಾದ ಪಡೆಗಳು ನಗರವನ್ನು ಸುತ್ತುವರಿಯುವ ಪ್ರಯತ್ನದಲ್ಲಿ ಕೈವ್‌ನ ದಕ್ಷಿಣಕ್ಕೆ 470 ಕಿಲೋಮೀಟರ್ ಇರುವ ಮೈಕೊಲೈವ್‌ನಲ್ಲಿ ತಮ್ಮ ದಾಳಿಯನ್ನು ಹೆಚ್ಚಿಸಿವೆ.
ಉಕ್ರೇನ್ನ ಅಧಿಕಾರಿಗಳು ಬುಧವಾರದಂದು ದಕ್ಷಿಣ ನಗರವಾದ ಮಾರಿಯುಪೋಲ್ನಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ರಷ್ಯಾ ಶೆಲ್ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ. ಈ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.