
ಇದಾದ ಬಳಿಕ ಭಕ್ತರೊಂದಿಗೆ ಕೀರ್ತನೆಯಲ್ಲಿ ಪಾಲ್ಗೊಂಡ ಮೋದಿ ಮಂಜೀರಾವನ್ನು ನುಡಿಸಿದ್ದಾರೆ. ಪ್ರಧಾನಿ ಮೋದಿ ಕೀರ್ತನೆಯಲ್ಲಿ ಭಾಗಿಯಾಗಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಸಂತ ರವಿದಾಸ್ ಜಯಂತಿಯ ಪ್ರಯುಕ್ತ ದೆಹಲಿಯ ಕರೋಲ್ಬಾಗ್ನಲ್ಲಿರುವ ಶ್ರೀ ಗುರು ರವಿದಾಸ್ ವಿಶ್ರಾಮ ಧಾಮ ದೇಗುಲದಲ್ಲಿ ಪ್ರಧಾನಿ ಮೋದಿ ಭಕ್ತರೊಂದಿಗೆ ಭಜನೆಯಲ್ಲಿ ಭಾಗಿಯಾದರು ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳೂ ಮತಗಳನ್ನು ಸೆಳೆಯಲು ಇನ್ನಿಲ್ಲದ ಹರಸಾಹಸವನ್ನು ಮಾಡುತ್ತಿವೆ. ಇದೇ ಕಾರಣಕ್ಕೆ ರವಿದಾಸ ಜಯಂತಿಯ ಪ್ರಯುಕ್ತ ರಾಜಕೀಯ ನಾಯಕರು ರವಿದಾಸ ವಿಶ್ರಾಮ ಧಾಮದತ್ತ ತೆರಳುತ್ತಿದ್ದಾರೆ.