ಲಂಡನ್: ಬಲವಾದ ಗಾಳಿಯ ನಡುವೆ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆದ ಬ್ರಿಟಿಷ್ ಏರ್‌ವೇಸ್ ವಿಮಾನ ಮತ್ತೆ ಆಗಸದೆಡೆಗೆ ಟೇಕ್ ಆಫ್ ಆದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ವಿಮಾನವು ರನ್‌ವೇಯಲ್ಲಿ ಹಾರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಲವಾರು ಪ್ರಯತ್ನಗಳ ನಂತರ, ವಿಮಾನವು ಲ್ಯಾಂಡಿಂಗ್ ಆಗಲು ವಿಫಲವಾಗುತ್ತದೆ. ಹೀಗಾಗಿ ಕೂಡಲೇ ಮತ್ತೆ ಆಕಾಶಕ್ಕೆ ಹಾರುತ್ತದೆ. ಕೊರ್ರಿ ಚಂಡಮಾರುತದಿಂದಾಗಿ ರನ್‌ವೇಯಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ ವಿಮಾನ ಲ್ಯಾಂಡಿಂಗ್ ಆಗಲು ಸಾಧ್ಯವಾಗಿಲ್ಲ.
ವಿದೇಶದಲ್ಲಿ ನೆಲೆಸಲಿಚ್ಛಿಸುವವರಿಗೆ ಈ ಗ್ರಾಮದಲ್ಲಿ ಸಿಗುತ್ತೆ ಶೂನ್ಯ ಬಡ್ಡಿದರದಲ್ಲಿ ಸಾಲ..!
ಇನ್ನು ವಿಮಾನ ಲ್ಯಾಂಡಿಂಗ್ ಆಗುವಾಗ ಸಾಧ್ಯವಾಗದೇ ಟೇಕ್ ಆಫ್ ಆಗುತ್ತಿದ್ದಂತೆ ಎರಡೂ ಕಡೆಗೆ ಅಲುಗಾಡಿದೆ. ಈ ದೃಶ್ಯವನ್ನು ಸೆರೆಹಿಡಿಯಲಾಗಿದ್ದು, ಪೈಲಟ್ ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಪೈಲಟ್ ಪದಕಕ್ಕೆ ಅರ್ಹರಾಗಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಶೀರ್ಷಿಕೆ ನೀಡಲಾಗಿದೆ.
ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಅನೇಕರು ಈ ದೃಶ್ಯವನ್ನು ನೋಡಿ ಆಘಾತಕ್ಕೊಳಗಾಗಿದ್ದರೆ, ಇತರರು ಪ್ರಯಾಣಿಕರು ಎಷ್ಟು ಭಯಭೀತರಾಗಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಪೈಲಟ್‌ನ ದಿಟ್ಟ ನಿರ್ಧಾರವನ್ನು ಕೊಂಡಾಡಿದ್ದಾರೆ.