alex Certify ರನ್​​ ವೇನಲ್ಲಿ ಹೊತ್ತಿ ಉರಿದ ಕೋಸ್ಟ್​ ಗಾರ್ಡ್ ವಿಮಾನ: ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರನ್​​ ವೇನಲ್ಲಿ ಹೊತ್ತಿ ಉರಿದ ಕೋಸ್ಟ್​ ಗಾರ್ಡ್ ವಿಮಾನ: ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ

ಚೆನ್ನೈನಿಂದ ಟೇಕಾಫ್​ ಆದ ಕೋಸ್ಟ್​ ಗಾರ್ಡ್ ಡೋರ್ನಿಯರ್​ 228 ವಿಮಾನವು ಚಕೇರಿ ವಿಮಾನ ನಿಲ್ದಾಣದ ರನ್​ವೇಯಿಂದ ಸ್ಕಿಡ್​ ಆಗಿ ಕಾಂಕ್ರಿಟ್​​​ ಸ್ಟ್ರಕ್ಚರ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ.

ಕಾನ್ಪುರದಲ್ಲಿರುವ ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​​ ಪರ್ಸನಲ್​ಗೆ ಭೇಟಿ ನೀಡಬೇಕಿದ್ದ ಐಎಎಫ್​ ಸಿಬ್ಬಂದಿ ಸರಿಯಾದ ಸಮಯದಲ್ಲಿ ಏರ್​ಕ್ರಾಫ್ಟ್​​ನಿಂದ ಹೊರಬರುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರೀ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಈ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಚಕೇರಿ ವಿಮಾನ ನಿಲ್ದಾಣದ ನಿರ್ದೇಶಕ ಬಿ.ಕೆ. ಝಾ , ಅಪಘಾತಕ್ಕೆ ನಿಖರವಾದ ಕಾರಣವನ್ನು ಪತ್ತೆಮಾಡಲಾಗುತ್ತಿದೆ. ರನ್​ವೇನಲ್ಲಿ ವಿಮಾನವು ಟರ್ಮ್ಯಾಕ್​ ಬಳಿಕ ಕಾಂಕ್ರೀಟ್​ ಸ್ಟ್ರಕ್ಚರ್ ಗೆ​ ಡಿಕ್ಕಿ ಹೊಡೆದ ಬಳಿಕ ಸ್ಥಗಿತಗೊಂಡಿತು ಎಂದು ಹೇಳಿದರು.

ಅಂದಹಾಗೆ ಎರಡು ದಿನಗಳ ಹಿಂದೆಯೇ ಈ ಘಟನೆ ಸಂಭವಿಸಿತ್ತು ಸೋಶಿಯಲ್​ ಮೀಡಿಯಾದಲ್ಲಿ ಭಾನುವಾರದಂದು ಘಟನೆಯ ವಿಡಿಯೋ ವೈರಲ್​ ಆದ ಬಳಿಕ ಬೆಳಕಿಗೆ ಬಂದಿದೆ. ಈ ದೃಶ್ಯಗಳಲ್ಲಿ ಐಎಎಫ್​ ಸಿಬ್ಬಂದಿ ಕಾಕ್​ಪಿಟ್​ ಕಡೆ ಧಾವಿಸಿ ಬಂದಿದ್ದು ಏರ್​ಕ್ರಾಫ್ಟ್​ನಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ.

— FL360aero (@fl360aero) March 5, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...