
ಕಾನ್ಪುರದಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪರ್ಸನಲ್ಗೆ ಭೇಟಿ ನೀಡಬೇಕಿದ್ದ ಐಎಎಫ್ ಸಿಬ್ಬಂದಿ ಸರಿಯಾದ ಸಮಯದಲ್ಲಿ ಏರ್ಕ್ರಾಫ್ಟ್ನಿಂದ ಹೊರಬರುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರೀ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಈ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಚಕೇರಿ ವಿಮಾನ ನಿಲ್ದಾಣದ ನಿರ್ದೇಶಕ ಬಿ.ಕೆ. ಝಾ , ಅಪಘಾತಕ್ಕೆ ನಿಖರವಾದ ಕಾರಣವನ್ನು ಪತ್ತೆಮಾಡಲಾಗುತ್ತಿದೆ. ರನ್ವೇನಲ್ಲಿ ವಿಮಾನವು ಟರ್ಮ್ಯಾಕ್ ಬಳಿಕ ಕಾಂಕ್ರೀಟ್ ಸ್ಟ್ರಕ್ಚರ್ ಗೆ ಡಿಕ್ಕಿ ಹೊಡೆದ ಬಳಿಕ ಸ್ಥಗಿತಗೊಂಡಿತು ಎಂದು ಹೇಳಿದರು.
ಅಂದಹಾಗೆ ಎರಡು ದಿನಗಳ ಹಿಂದೆಯೇ ಈ ಘಟನೆ ಸಂಭವಿಸಿತ್ತು ಸೋಶಿಯಲ್ ಮೀಡಿಯಾದಲ್ಲಿ ಭಾನುವಾರದಂದು ಘಟನೆಯ ವಿಡಿಯೋ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ. ಈ ದೃಶ್ಯಗಳಲ್ಲಿ ಐಎಎಫ್ ಸಿಬ್ಬಂದಿ ಕಾಕ್ಪಿಟ್ ಕಡೆ ಧಾವಿಸಿ ಬಂದಿದ್ದು ಏರ್ಕ್ರಾಫ್ಟ್ನಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ.