alex Certify ರಣವೀರ್‌ ಸಿಂಗ್‌ ಬೆನ್ನಲ್ಲೇ ಬೆತ್ತಲಾಗಿ ಕಾಣಿಸಿಕೊಂಡ ಮತ್ತೊಬ್ಬ ನಟ, ವೈರಲ್‌ ಆಗ್ತಿವೆ ನಗ್ನ ಫೋಟೋಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಣವೀರ್‌ ಸಿಂಗ್‌ ಬೆನ್ನಲ್ಲೇ ಬೆತ್ತಲಾಗಿ ಕಾಣಿಸಿಕೊಂಡ ಮತ್ತೊಬ್ಬ ನಟ, ವೈರಲ್‌ ಆಗ್ತಿವೆ ನಗ್ನ ಫೋಟೋಗಳು

ಬಾಲಿವುಡ್‌ ನಟ ರಣವೀರ್‌ ಸಿಂಗ್‌ರ ಬೆತ್ತಲೆ ಫೋಟೋ ಶೂಟ್‌ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆ ಫೋಟೋಗಳು ವೈರಲ್‌ ಆಗ್ತಿದ್ದಂತೆ ಹಲವರು ಅದೇ ರೀತಿ ನಗ್ನವಾಗಿ ಕ್ಯಾಮರಾಗೆ ಪೋಸ್‌ ಕೊಡಲು ಆರಂಭಿಸಿದ್ದಾರೆ. ಹಿಂದಿ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿರೋ ನಟ ಕುಣಾಲ್‌ ವರ್ಮ ಕೂಡ ಈಗ ಬಟ್ಟೆಯಿಲ್ಲದೇ ಕಾಣಿಸಿಕೊಂಡಿದ್ದಾರೆ.

ತಮ್ಮ ಕಟ್ಟುಮಸ್ತಾದ ದೇಹವನ್ನು ಪ್ರದರ್ಶಿಸಿರುವ ಕುಣಾಲ್‌, ಬೆತ್ತಲೆ ಫೋಟೋ ಶೂಟ್‌ ಮಾಡಿಸಿಕೊಂಡು ಅದನ್ನು ಜಾಲತಾಣಗಳಲ್ಲಿ ಅಪ್ಲೋಡ್‌ ಸಹ ಮಾಡಿದ್ದಾರೆ. ಈ ರೀತಿ ಬಟ್ಟೆಯೇ ಇಲ್ಲದೆ ಫೋಟೋ ತೆಗೆಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.

ರಣವೀರ್‌ ಸಿಂಗ್‌ರ ನಗ್ನ ಫೊಟೋ ಶೂಟ್‌ ಅನ್ನು ಕುಣಾಲ್‌ ಮೆಚ್ಚಿಕೊಂಡಿದ್ದಾರೆ. ರಣವೀರ್‌ ಫೋಟೋಗಳು ವೈರಲ್‌ ಆದ ಸಮಯದಲ್ಲೇ ಕುಣಾಲ್‌ ಕೂಡ ಈ ರೀತಿಯ ಫೋಟೋ ಶೂಟ್‌ ಮಾಡಿಸಿಕೊಂಡಿದ್ದಾರಂತೆ. ನನ್ನ ದೇಹವನ್ನು ನಾನು ಅಪಾರವಾಗಿ ಪ್ರೀತಿಸ್ತೇನೆ, ನನ್ನ ಬಳಿಯಿರುವ ಹಣವನ್ನೆಲ್ಲ ವರ್ಕೌಟ್‌ಗಾಗಿ ಮೀಸಲಿಡುತ್ತೇನೆ ಅಂತಾ ಹೇಳಿದ್ದಾರೆ.

ತುಜ್‌ ಸಂಗ್‌ ಪ್ರೀತ್‌ ಲಗಾಯಿ ಸಜ್ನಾ, ಏಕ್‌ ಮುಟ್ಟಿ ಆಸಮಾನ್‌ ಸೇರಿದಂತೆ ಹಲವು ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ಕುಣಾಲ್‌ ವರ್ಮಾ ಹಲವು ವರ್ಷಗಳಿಂದ ಸೀರಿಯಲ್‌ಗಳಲ್ಲಿ ನಟಿಸ್ತಿದ್ದಾರೆ. ಕುಣಾಲ್‌ಗೆ ಪೂಜಾ ಬ್ಯಾನರ್ಜಿಯೊಂದಿಗೆ ವಿವಾಹವಾಗಿದ್ದು, ಒಂದು ಗಂಡು ಮಗುವೂ ಇದೆ.

https://www.instagram.com/p/Cg3TOsmqBnK/?utm_source=ig_embed&ig_rid=81c8a9dc-10ef-436a-9094-d526fea5e863

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...