alex Certify ರಂಜಾನ್‌ ಬಂತಂದ್ರೆ ಖರ್ಜೂರದ್ದೇ ಹಬ್ಬ, ಭಾರತಕ್ಕೆ ಎಲ್ಲಿಂದ ಆಮದಾಗುತ್ತೆ ಇಷ್ಟೊಂದು ಫ್ರೂಟ್ ಗೊತ್ತಾ….?‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಂಜಾನ್‌ ಬಂತಂದ್ರೆ ಖರ್ಜೂರದ್ದೇ ಹಬ್ಬ, ಭಾರತಕ್ಕೆ ಎಲ್ಲಿಂದ ಆಮದಾಗುತ್ತೆ ಇಷ್ಟೊಂದು ಫ್ರೂಟ್ ಗೊತ್ತಾ….?‌

ಭಾರತದಲ್ಲಿ ಖರ್ಜೂರಕ್ಕೆ ಸಾಕಷ್ಟು ಬೇಡಿಕೆಯಿದೆ. ಅದರಲ್ಲೂ ರಂಜಾನ್‌ ತಿಂಗಳಿನಲ್ಲಿ ಖರ್ಜೂರಕ್ಕೆ ಡಿಮ್ಯಾಂಡ್‌ ಮತ್ತಷ್ಟು ಹೆಚ್ಚಾಗುತ್ತದೆ. ರಂಜಾನ್‌ ನಲ್ಲಿ ಇಸ್ಲಾಂ ಧರ್ಮದವರು ಖರ್ಜೂರವನ್ನು ತಿನ್ನುವ ಮೂಲಕ ತಮ್ಮ ಉಪವಾಸವನ್ನು ಮುರಿಯುತ್ತಾರೆ.

ಭಾರತದಲ್ಲಿ ಖರ್ಜೂರದ ಉತ್ಪಾದನೆ ತೀರಾ ಕಡಿಮೆ, ಆದರೆ ಬೇಡಿಕೆ ಬಹಳ ಅಧಿಕವಾಗಿರೋದ್ರಿಂದ ಈ ಹಣ್ಣನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ.

ಭಾರತದಲ್ಲಿ ಖರ್ಜೂರವನ್ನು ಮುಖ್ಯವಾಗಿ ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಈಜಿಪ್ಟ್, ಇರಾನ್, ಇರಾಕ್, ಯುಎಇ ಮತ್ತು ಸೌದಿ ಅರೇಬಿಯಾ ದೇಶಗಳಿಂದ ಖರ್ಜೂರ ಭಾರತಕ್ಕೆ ಬರುತ್ತದೆ, ಪಾಕಿಸ್ತಾನವೂ ಭಾರತಕ್ಕೆ ಖರ್ಜೂರವನ್ನು ಪೂರೈಸುತ್ತದೆ ಅನ್ನೋದಂತೂ ಬಹಳ ಅಚ್ಚರಿಯ ಸಂಗತಿ.

ಈಜಿಪ್ಟ್ ನಿಂದ 16 ಮಿಲಿಯನ್ ಮೆಟ್ರಿಕ್ ಟನ್, ಇರಾನ್ ನಿಂದ 1.3 ಮಿಲಿಯನ್ ಮೆಟ್ರಿಕ್ ಟನ್, ಇರಾಕ್ ನಿಂದ 639 ಸಾವಿರ ಮೆಟ್ರಿಕ್ ಟನ್, ಸುಡಾನ್ ನಿಂದ  438 ಸಾವಿರ ಮೆಟ್ರಿಕ್ ಟನ್, ಯುಎಇಯಿಂದ 323 ಸಾವಿರ ಮೆಟ್ರಿಕ್ ಟನ್, ಸೌದಿ ಅರೇಬಿಯಾದಿಂದ 1.5 ಮಿಲಿಯನ್ ಮೆಟ್ರಿಕ್ ಟನ್, ಪಾಕಿಸ್ತಾನದಿಂದ  483 ಸಾವಿರ ಮೆಟ್ರಿಕ್ ಟನ್, ಓಮನ್ ನಿಂದ 372 ಸಾವಿರ ಮೆಟ್ರಿಕ್ ಟನ್ ಹಾಗೂ ಟುನೀಶಿಯಾದಿಂದ 288 ಸಾವಿರ ಮೆಟ್ರಿಕ್ ಟನ್ ಖರ್ಜೂರವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ.

ಖರ್ಜೂರದಲ್ಲಿ ಪೋಷಕಾಂಶಗಳು ಎಷ್ಟಿವೆ ಅಂತ ನೋಡೋದಾದ್ರೆ,

ಕ್ಯಾಲೋರಿ – 20 ಗ್ರಾಂ

ಕೊಬ್ಬು – 0

ಸೋಡಿಯಂ – 0.14 ಮಿಲಿ ಗ್ರಾಂ

ಕಾರ್ಬೋಹೈಡ್ರೇಟ್ಸ್ – 5.3 ಗ್ರಾಂ

ಫೈಬರ್ – 0.6 ಗ್ರಾಂ

ಸಕ್ಕರೆ – 4 ಗ್ರಾಂ

ಪ್ರೋಟೀನ್ – 0.2 ಗ್ರಾಂ

ಖರ್ಜೂರದಿಂದ್ಲೇ ಉಪವಾಸ ಕೈಬಿಡುವುದೇಕೆ ?

ಸೂರ್ಯಾಸ್ತದ ಸಮಯದಲ್ಲಿ, ಇಫ್ತಾರಿ ತಿನ್ನುವ ಮೂಲಕ ಉಪವಾಸವನ್ನು ಕೊನೆಗೊಳಿಸಲಾಗುತ್ತದೆ. ಇದರಲ್ಲಿ ಅನೇಕ ವಿಶೇಷ ರೀತಿಯ ಆಹಾರವನ್ನು ಸೇವಿಸಲಾಗುತ್ತದೆ. ಕಡ್ಡಾಯವಾಗಿ ರಂಜಾನ್‌ ಉಪವಾಸ ನಿರತರು ಖರ್ಜೂರವನ್ನು ಸೇವಿಸ್ತಾರೆ. ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಅವರ ನೆಚ್ಚಿನ ಹಣ್ಣು ಇದು ಎಂಬ ನಂಬಿಕೆಯೇ ಇದಕ್ಕೆ ಕಾರಣ. ಈ ಸಂಪ್ರದಾಯವನ್ನು ಇಂದಿಗೂ ಮುಸ್ಲಿಮರು ಅನುಸರಿಸುತ್ತಿದ್ದಾರೆ.

ಒಬ್ಬ ವ್ಯಕ್ತಿ ದಿನವಿಡೀ ಹಸಿದುಕೊಂಡಿದ್ದಾಗ ಅವನ ದೇಹದಲ್ಲಿನ ಶಕ್ತಿಯು ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುವಂತಹ ಆಹಾರವನ್ನು ತಿನ್ನಬೇಕು. ಈ ಕಾರಣಕ್ಕೆ ಖರ್ಜೂರವನ್ನು ಸೇವಿಸಲಾಗುತ್ತದೆ. ಖರ್ಜೂರ ತಿಂದರೆ ದೇಹಕ್ಕೆ ಚೈತನ್ಯ ಬರುತ್ತದೆ. ಇದಲ್ಲದೇ ಇಫ್ತಾರ್ ಸಮಯದಲ್ಲಿ ತಿಂದ ವಸ್ತುಗಳು ಸರಿಯಾಗಿ ಜೀರ್ಣವಾಗುತ್ತದೆ. ಗ್ಯಾಸ್ಟ್ರಿಕ್‌ ಸಮಸ್ಯೆ ಆಗುವುದಿಲ್ಲ. ಖರ್ಜೂರವನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ನಾರಿನಂಶ ದೊರೆಯುತ್ತದೆ, ಇದಲ್ಲದೇ ಈ ಹಣ್ಣಿನಲ್ಲಿ ಪೋಷಕಾಂಶಗಳೂ ಹೇರಳವಾಗಿವೆ.

ಖರ್ಜೂರದಲ್ಲಿರುವ ಮೆಗ್ನೀಸಿಯಮ್, ತಾಮ್ರ, ವಿಟಮಿನ್, ಕಬ್ಬಿಣ ಮತ್ತು ಪ್ರೊಟೀನ್ ದೇಹವನ್ನು ಕ್ರಿಯಾಶೀಲವಾಗಿರಿಸುತ್ತದೆ. ಖರ್ಜೂರವು ಕ್ಷಾರೀಯ ಉಪ್ಪನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಖರ್ಜೂರವು ಸುಲಭವಾಗಿ ಜೀರ್ಣವಾಗುತ್ತದೆ, ಅದಕ್ಕಾಗಿಯೇ ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಯಾವುದೇ ಹಾನಿಯಾಗುವುದಿಲ್ಲ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...