
ರಾಜಕಾರಣಿ ಪಿ.ಸಿ ಮೋಹನ್ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮೆಟ್ರೋ ನಿಲ್ದಾಣದ ಬಳಿ ನಿಂತಿದ್ದ ಯೋಧರ ಬಳಿಗೆ ಪುಟ್ಟ ಬಾಲಕಿಯೊಬ್ಬಳು ಬರುತ್ತಾಳೆ. ಇವರಲ್ಲಿ ಓರ್ವ ಯೋಧ ಬಾಗಿ ಬಾಲಕಿಯ ಕೆನ್ನೆಯನ್ನು ಹಿಂಡುತ್ತಾರೆ. ಕೂಡಲೇ ಬಾಲಕಿಯು ಆ ಯೋಧನ ಕಾಲಿಗೆರಗಿ ನಮಸ್ಕಾರ ಮಾಡಿದ್ದಾಳೆ.
ದೇಶದ ಎಲ್ಲಾ ಪೋಷಕರೂ ಮಕ್ಕಳಿಗೆ ಈ ರೀತಿಯಲ್ಲಿ ದೇಶಪ್ರೇಮವನ್ನು ಕಲಿಸಬೇಕು ಎಂದು ಪಿ ಸಿ ಮೋಹನ್ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.