
ಯಾವುದೇ ಸಮಾರಂಭ ಅಥವಾ ಪಾರ್ಟಿಗಳಲ್ಲಿ ಬಣ್ಣದ ಹೂಗಳ ಈ ಉಂಗುರಗಳು ಮಾನಿನಿಯರ ಕೈಗಳ ಅಂದವನ್ನು ಹೆಚ್ಚಿಸುತ್ತಿದೆ. ಸೀರೆ, ಡ್ರೆಸ್, ಕ್ಯಾಶುವಲ್ ವೇರ್ ಗೆ ತಕ್ಕಂತೆ ಮ್ಯಾಚ್ ಮಾಡಿಕೊಳ್ಳಬಹುದಾದ ಈ ರಿಂಗ್ ಮಾಮೂಲಿ ಉಂಗುರಗಳಿಗಿಂತ ಭಿನ್ನ.
ಹೊಸ ಬಗೆಯ ಫ್ಯಾಷನ್ ಇಷ್ಟಪಡುವ ಯುವತಿಯರು ಈ ರಿಂಗ್ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಈ ಉಂಗುರಗಳು ಕೂಡ ಸೆಂಟರ್ ಆಫ್ ಅಟ್ರಾಕ್ಷನ್ ಅಂತಲೇ ಹೇಳಬಹುದು. ಒಂದೇ ರೀತಿಯ ರಿಂಗ್ ಹಾಕಿ ಬೋರ್ ಆಗಿದ್ದರೆ, ನೀವೂ ಒಮ್ಮೆ ಈ ಸುಂದರ ಉಂಗುರಗಳನ್ನು ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಿ.